ಹುಬ್ಬಳ್ಳಿ : ಫ್ಲೈಓವರ್ ನಿರ್ಮಾಣಕ್ಕಾಗಿ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ ತೆರವು ಮಾಡಲಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಫ್ಲೈಓವರ್ ನಿರ್ಮಾಣ ಕಾಮಗಾರಿಗೆ ಈಗಾಗಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಸಾಕಷ್ಟು ಬಾರಿ ಲಿಂಗಾಯತ ಮುಖಂಡರ ಜೊತೆಗೆ ಸಭೆ ನಡೆಸಲಾಗಿತ್ತು. ಸಭೆಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು ಜೊತೆಗೆ ಒಮ್ಮತವು ಬಂದಿರಲಿಲ್ಲ. ಹೀಗಾಗಿ ಪುತ್ಥಳಿ ತೆರವು ಕಾರ್ಯವನ್ನು ಇಷ್ಟು ದಿನ ನಿಲ್ಲಿಸಲಾಗಿತ್ತು.
ಆದರೆ ನಿನ್ನೆ ತಡರಾತ್ರಿ ಏಕಾಏಕಿ ತಾಂತ್ರಿಕ ಉಪಕರಣಗಳ ಮೂಲಕ ಬಸವ ವನದಲ್ಲಿರುವ ಬಸವೇಶ್ವರರ ಮೂರ್ತಿಯನ್ನು ತೆರವು ಮಾಡಲಾಗಿದೆ. ಫ್ಲೈಓವರ್ ಕೆಲಸ ಪೂರ್ಣಗೊಂಡ ನಂತರ ಮತ್ತೆ ಮೂರ್ತಿಯನ್ನು ಮರು ಸ್ಥಾಪಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದಾರೆ.










