ಫ್ಲೈಟ್ ಡೋರ್ ಓಪನ್ ವಿಚಾರ.. ತೇಜಸ್ವಿ ಸೂರ್ಯ ನಡೆಯನ್ನ ಸಮರ್ಥಿಸಿಕೊಂಡ ಅಣ್ಣಾಮಲೈ.

77

ಚಿಕ್ಕಮಗಳೂರು : ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಬಿಜೆಪಿ ಸಂಸದರು ತೆರೆದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಭಾಗಿಯಾಗಿಲು ತಮಿಳುನಾಡಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂಸದ ತೇಜಸ್ವಿ ಸೂರ್ಯ ಫ್ಲೈಟ್ ಡೋರ್ ಓಪನ್ ಮಾಡಿಲ್ಲ. ಅದನ್ನು ರೊಟೇಟ್ ಮಾಡಿ ಓಪನ್ ಮಾಡಬೇಕು. ಸಂಸದರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಡೋರ್ ಓಪನ್ ಮಾಡಿಲ್ಲ ಎಂದರು.

ಏನಿದು ಘಟನೆ : ಡಿಸೆಂಬರ್ 10ರಂದು ಇಂಡಿಗೋ ಫ್ಲೈಟ್ 6E 7339 ಚೆನ್ನೈಯಿಂದ ತಿರುಚಿರಾಪಳ್ಳಿಗೆ ಹೊರಡಲು ಸಿದ್ಧವಾಗಿತ್ತು. ಈ ವೇಳೆ ಪ್ರಯಾಣಿಕರೊಬ್ಬರು ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದಾರೆ. ಘಟನೆ ಬಳಿಕ ಸುರಕ್ಷತಾ ಕ್ರಮಗಳನ್ನು ಪಾಲಿಸಿ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಯಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ತಿಳಿಸಿತ್ತು.