ರಾಮನಗರ : ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ನೂರಾರು ಪುಟಗಳ ದೋಷಾರೋಪ ಪಟ್ಟಿಯಲ್ಲಿ ಸತ್ಯ ಬಹಿರಂಗವಾಗಿದೆ. ಆರೋಪಿಯಾಗಿರುವ ಯುವತಿ ನೀಲಾಂಬಿಕೆ ಸ್ವಾಮೀಜಿ ಮಾಡಿದ್ದ ಒಂದು ಅವಮಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಅನ್ನೊ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಚಾರ್ಜ್ಶೀಟ್ನಲ್ಲಿ ಏನಿದೆ?
ನೀಲಾಂಬಿಕೆಗೆ ಬಂಡೆಮಠದ ಸ್ವಾಮಿಯ ಮೇಲೆ ಸೇಡು ಇತ್ತು. ಸ್ವಾಮೀಜಿ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಕಾಯುತ್ತಿದ್ದಳು. ಅದಕ್ಕಾಗಿ ಈ ಹಿಂದೆ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು.
ಸ್ವಾಮೀಜಿ ಒಬ್ಬ ಹೆಣ್ಣುಬಾಕ, ಹೆಣ್ಣಿನ ಮೋಹ ಇದೆ ಅಂತಾ ಹೇಳಿದ್ದಳು. ಈ ವಿಚಾರ ಗೊತ್ತಾಗಿ ಬಂಡೆಮಠದ ಸ್ವಾಮಿ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಂತೆ. ಆ ಆಡಿಯೋದ ಮೂಲಕ ನೀಲಾಂಬಿಕೆಗೆ ಸ್ವಾಮೀಜಿ ಅವಮಾನ ಮಾಡಿದ್ದರು. ಅವಮಾನದಿಂದ ಕುಪಿತಗೊಂಡಿದ್ದ ನೀಲಾಂಬಿಕೆ ಸೇಡು ತೀರಿಸಿಕೊಳ್ಳೋ ಪ್ಲಾನ್ ಮಾಡಿದ್ದಳು.
ಈ ವಿಚಾರ ತಿಳಿದು ಕಣ್ಣೂರು ಮಠದ ಸ್ವಾಮೀಜಿ ನೀಲಾಂಬಿಕೆಯನ್ನು ಬಳಸಿಕೊಂಡಿದ್ದಾರೆ. ನೀಲಾಂಬಿಕೆಗೆ ಹಣದ ಸಹಾಯ ಮಾಡಿ ವೀಡಿಯೋ ಕಾಲ್ ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಸತ್ಯ ಚಾರ್ಜ್ಶೀಟ್ನಲ್ಲಿ ಬಹಿರಂಗವಾಗಿದೆ.










