ಬಣಕಲ್ : ನಾಳೆ (29 ಜೂನ್) ಬಣಕಲ್‍ನಲ್ಲಿ ನುಡಿ-ಗೀತನಮನ ಕಾರ್ಯಕ್ರಮ…

423
firstsuddi

ಬಣಕಲ್ : ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಅಧ್ಯಕ್ಷರಾದ ದಿವಂಗತ ಮೋಹನ್‍ಕುಮಾರ್ ಎಸ್ ಶೆಟ್ಟಿ ಅವರ ನೆನಪಿನ ನುಡಿ-ಗೀತ ನಮನ ಕಾರ್ಯಕ್ರಮ ನಾಳೆ ಮದ್ಯಾಹ್ನ ಮೂರು ಗಂಟೆಗೆ ಬಣಕಲ್ ಗ್ರಾ.ಪಂ ಸಮುದಾಯಭವನದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಮತ್ತು ಬಣಕಲ್, ವಿದ್ಯಾಭಾರತಿ ವಿದ್ಯಾ ಸಂಸ್ಥೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮೊಹನ್‍ಕುಮಾರ್ ಶೆಟ್ಟಿ ಅವರ ಒಡನಾಡಿಗಳು, ವಿವಿಧ ಸಂಘಸಂಸ್ಥೆಗಳ ಪಧಾಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.