ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್ ಮೂಲಕ ವಿಮ್ಸ್ ಆಸ್ಪತ್ರೆಗೆ ದರ್ಶನ್ ಶಿಫ್ಟ್.

36

ಬಳ್ಳಾರಿ: ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ಕಳೆದ ರಾತ್ರಿ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದರ್ಶನ್ ಅವರಿಗೆ ತೀವ್ರವಾಗಿ ಬೆನ್ನು ನೋವಿನ ಸಮಸ್ಯೆ ಜಾಸ್ತಿ ಆಗಿರುವುದರಿಂದ ವೈದ್ಯರು ಜೈಲಿಗೆ ಬಂದು ದರ್ಶನ್ ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ನಂತರ ದರ್ಶನ್ ಅವರಿಗೆ ಎಂಆರ್‍ಐ ಸ್ಕ್ಯಾನಿಂಗ್ ನ ಅಗತ್ಯ ಇದೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಹೆಲ್ತ್ ಚೆಕಪ್ ಮಾಡಲು ವಿಮ್ಸ್ ಆಸ್ಪತ್ರೆಗೆ ವಿಮ್ಸ್ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಆಂಬ್ಯುಲೆನ್ಸ್ ಮೂಲಕ ದರ್ಶನ್ ಅವರನ್ನು ಕರೆದುಕೊಂಡು ಹೋಗಲಾಗಿದೆ. ಬಳ್ಳಾರಿಯ ಸರ್ಕಲ್‍ಗಳಲ್ಲಿ ಭದ್ರತೆಯ ದೃಷ್ಟಿಯಿಂದ ಪೊಲೀಸರನ್ನು ಆಯೋಜಿಸಲಾಗಿತ್ತು. ಆಂಬ್ಯುಲೆನ್ಸ್ ಬಳ್ಳಾರಿ ಜೈಲಿಗೆ ಬಂದಿದ್ದು, ದರ್ಶನ್ ಆಂಬ್ಯುಲೆನ್ಸ್ ನಲ್ಲಿ ವಿಮ್ಸ್ ಆಸ್ಪತ್ರೆಗೆ ತೆರಳಿದ್ದಾರೆ. ದರ್ಶನ್ ರನ್ನು ವಿಮ್ಸ್ ಆಸ್ಪತ್ರೆಗೆ ಕಳುಯಿಸುವ ವಿಷಯ ತಿಳಿದ ಅವರ ಅಭಿಮಾನಿಗಳು ಆ್ಯಂಬುಲೆನ್ಸ್‍ಗೆ ಅಡ್ಡ ಬರುವ ಸಾಧ್ಯತೆ ಇರುವುದರಿಂದ ಪೊಲೀಸ್ ಭದ್ರತೆ ನೀಡಲಾಗಿದೆ.