ಬಾಲಿವುಡ್ ನಟಿ ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ ಪತ್ರ…

69
firstsuddi

ಮುಂಬೈ: ವೀರ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಕ್ಕೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಪತ್ರ ಬರೆದಿದ್ದು, ಜೀವ ತೆಗೆಯುವುದಾಗಿ ಬೆದರಿಕೆ ಹಾಕಲಾಗಿದೆ.

ವರ್ಸೋವಾದಲ್ಲಿರುವ ನಟಿಯ ಮನೆಗೆ ಪತ್ರ ತಲುಪಿಸಲಾಗಿದ್ದು, ಪತ್ರ ನೋಡಿದ ಸ್ವರಾ ಭಾಸ್ಕರ್ ವರ್ಸೋವಾ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದಿಯಲ್ಲಿ ಪತ್ರ ಬರೆಯಲಾಗಿದ್ದು ಜೀವ ಬೆದರಿಕೆ ಹಾಕಲಾಗಿದೆ. ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದನ್ನು ದೇಶದ ಯುವಜನತೆ ಸಹಿಸಲಾರರು ಎಂದು ಪತ್ರದಲ್ಲಿ ಹೇಳಲಾಗಿದೆ.