ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರದ ಕ್ಯಾಪ್ಟನ್ ಆಗಿ ಬೈಕ್ ರೇಸರ್ ಅರವಿಂದ್ ಅವರು ಆಯ್ಕೆ ಆಗಿದ್ದಾರೆ. ಅರವಿಂದ್ ಅವರಿಗೆ ಕ್ಯಾಪ್ಟನ್ ಪಟ್ಟ ಸಿಗುತ್ತಿದ್ದಂತೆ ಕೆಲವರು ಸಂತೋಷ ಪಟ್ಟರೆ, ಕೆಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ನಲ್ಲಿ ರಾಜೀವ್ ಹಾಗೂ ದಿವ್ಯಾ ಉರುಡಗ ಅದ್ಭುತವಾಗಿ ಆಟವಾಡಿ ಗೆದ್ದಿದ್ದರು. ಇದು ಕ್ಯಾಪ್ಟನ್ಸಿ ಟಾಸ್ಕ್ ಗೆ ಸಹಾಯ ಮಾಡಿತು. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ದಿವ್ಯಾ ಸುರೇಶ್, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್ ಗೆ ಆಯ್ಕೆ ಆಗಿದ್ದರು. ಯು ಆಕಾರದ ಅಯಾಸ್ಕಾಂತವನ್ನು ಎರಡು ಕಬ್ಬಿಣದ ಹಿಡಿಕೆಯಲ್ಲಿ ಹಿಡಿದುಕೊಳ್ಳಬೇಕು. ಈ ಟಾಸ್ಕ್ ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್ ಅವರು, ಈ ಮೂಲಕ ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದಾರೆ.










