ಬಿಗ್ ಬಾಸ್ ಮನೆಯಿಂದ ಹೊರ ಬಂದ ಡ್ಯಾನ್ಸರ್ ಕಿಶನ್…

707
firstsuddi

ಬೆಂಗಳೂರು : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ಆರಂಭವಾಗಿ ಇನ್ನು ಒಂದು ವಾರ ಕಳೆದಿಲ್ಲ. ಆದರೆ ಅಷ್ಟರಲ್ಲಿ ಡ್ಯಾನ್ಸರ್ ಕಿಶನ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಿಶನ್ ಅವರು ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿ ಹೊರ ಬಂದಿಲ್ಲ. ಬದಲಾಗಿ ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಿಶನ್ ಅವರು ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅವರು ಮನೆಯಿಂದ ಹೊರ ಹೋಗಿದ್ದಾರೆ. ನಿನ್ನೆ ರಾತ್ರಿ ಬಿಗ್ ಬಾಸ್ ನೀಡಿದ್ದ ಟಾಸ್ಕ್ ನ್ನು ಮುಗಿಸಿದ ಬಳಿಕ ಕಿಶನ್ ಅವರು ಕನ್ಫೇಶನ್ ರೂಮಿಗೆ ತೆರಳಿದ್ದು, ಈ ವೇಳೆ ಬಿಗ್ ಬಾಸ್ ಕಿಶನ್ ಅವರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವಂತೆ  ಹೇಳಿ ಚಿಕಿತ್ಸೆಗಾಗಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.