ಬಿಜೆಪಿ ಎಂಎಲ್‍ಸಿ ಸಂಬಂಧಿ ಸತೀಶ್ ವಾಘ್ ಅವರ ಹತ್ಯೆ ಪ್ರಕರಣದಲ್ಲಿ ಆತಂಕದ ವಿಚಾರವನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈ ಹತ್ಯೆಗೆ ಅವರ ಪತ್ನಿಯೇ 5 ಲಕ್ಷ ರೂ. ಸುಪಾರಿ ಕೊಟ್ಟಿದ್ದರು, ಆಕೆಯೇ ಕೊಲೆಯ ಹಿಂದಿನ ಮಾಸ್ಟರ್‌ಮೈಂಡ್ ಎನ್ನುವ ವಿಚಾರ ತಿಳಿದುಬಂದಿದೆ. ಇದೀಗ ಪೊಲೀಸರು ಆಕೆಯನ್ನು ಕೂಡ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಿಜೆಪಿ ಎಂಎಲ್‍ಸಿ ಯೋಗೀಶ್ ತಿಲೇಕರ್ ಸಂಬಂಧಿ ಸತೀಶ್ ವಾಘ್ ಅವರನ್ನು ಬೀಕರವಾಗಿ ಹತ್ಯೆ ಮಾಡಿರುವುದರ ಹಿಂದೆ ಪತ್ನಿಯದ್ದೇ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಸತೀಶ್ ವಾಘ್ ಕೊಲೆಗೆ ಸಂಬಂಧಿಸಿದಂತೆ ಪುಣೆ ಪೊಲೀಸ್ ಕ್ರೈಂ ಬ್ರ್ಯಾಂಚ್ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಆಘಾತಕಾರಿ ವಿಚಾರ ಬಹಿರಂಗಗೊಂಡಿದ್ದು, ಈ ಹತ್ಯೆ ಹಿಂದಿನ ಮಾಸ್ಟರ್‌ಮೈಂಡ್ ಸತೀಶ್ ಅವರ ಪತ್ನಿಯೇ ಎಂಬುದು ತಿಳಿದುಬಂದಿದೆ. ‘ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಪ್ರಕಾರ, ಮೊದಲ ಆರೋಪಿ ಅತಿಶ್ ಜಾಧವ್, ವಾಘ್ ಪತ್ನಿ ಕೊಲೆಗೆ ಸುಪಾರಿಯಾಗಿ 5 ಲಕ್ಷ ರೂ. ನೀಡಿದ್ದರು ಎಂದು ತಿಳಿಸಿದ್ದು, ಬುಧವಾರ ಆಕೆಯನ್ನು ಬಂಧಿಸಲಾಗಿದೆ. ಕೊಲೆ ಮಾಡಲು ವಾಘ್ ಪತ್ನಿಯಿಂದ 5 ಲಕ್ಷ ರೂಪಾಯಿ ಪಡೆದಿದ್ದನ್ನು ಜಾಧವ್ ಒಪ್ಪಿಕೊಂಡಿದ್ದಾನೆ. ಅಪಹರಣ ಮತ್ತು ಹತ್ಯೆಯ ಹಿಂದೆ ಆಕೆಯ ಪಾತ್ರವನ್ನು ತನಿಖೆಯಿಂದ ಸಾಬೀತುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಡಿಸೆಂಬರ್ 9 ರಂದು ಬೆಳಗ್ಗೆ 5.30 ರ ಸುಮಾರಿಗೆ ಪುಣೆಯ ಯವತ್ ಪ್ರದೇಶದಲ್ಲಿ ಬೆಳಗಿನ ವಾಕ್ ಮಾಡುವಾಗ ವಾಘ್ ಅವರನ್ನು ಅಪಹರಿಸಲಾಗಿತ್ತು ಎಂದು ತಿಳಿಸಿದ್ದಾರೆ. ನಡೆದ ಘಟನೆಯನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿಯಲಾಗಿದ್ದು, 48 ಗಂಟೆಗಳಲ್ಲಿ ಮೊದಲ ಆರೋಪಿಯನ್ನು ಪೊಲೀಸರು ಬಂಧಿಸಲು ಸಾಧ್ಯವಾಯಿತು. ವಾಘ್ ಅವರ ದೇಹವು ಪುಣೆ ಬಳಿಯ ಶಿಂಧೇವನೆ ಘಾಟ್‍ನಲ್ಲಿ ಸುಮಾರು 70 ಬಾರಿ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.










