ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡ ಬಿಎಸ್‍ಪಿ.

61
firstsuddi

ಚಿಕ್ಕಮಗಳೂರು: ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಬಿ. ಸುಧಾ ನಗರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಗವನಹಳ್ಳಿ, ಕೋಟೆ, ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಮಾರ್ಕೆಟ್ ರಸ್ತೆಯಲ್ಲಿ ರೋಡ್ ಶೋ ನಡೆಸಿ ಬೆಳಗಿನಿಂದ ಸಂಜೆವರೆಗೆ ಮತಯಾಚನೆ ಮಾಡಿದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಪಾರದರ್ಶಕ ಆಡಳಿತಕ್ಕಾಗಿ ತಮ್ಮನ್ನು ಚುನಾಯಿಸುವಂತೆ ಮತದಾರರಿಗೆ ಮನವಿ ಮಾಡಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಉಪಾಧ್ಯಕ್ಷ ಕೆ.ಆರ್. ಗಂಗಾಧರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್. ಮಂಜುಳಾ ಪಕ್ಷದ ಮುಖಂಡರಾದ ವಸಂತ, ವಿಜಯಕುಮಾರ್, ರತ್ನ, ಸಾಕಮ್ಮ, ಸಿದ್ದಯ್ಯ, ಕಿಟ್ಟು, ವಾಹೀದ್‍ಜಾನ್, ಆಸ್ಮಾ ಪರ್ವೀನ್ ಹಾಜರಿದ್ದರು.