ಭಾಗಲಕೋಟೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು ಹಾಗೂ ಶಾಸಕ ವೀರಣ್ಣ ಚರಂತಿಮಠ ಸಚಿವರಾಗಬೇಕು ಎಂದು ಅಭಿಮಾನಿಯೊಬ್ಬರು ದೇವರ ಮೊರೆ ಹೋಗಿದ್ದು, ಭಾಗಲಕೋಟೆಯ ವಿದ್ಯಾಗಿರಿಯ ನಿವಾಸಿಯಾದ ಮಾಂತೇಶ್ ಅವರು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು, ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಬೇಕು ಹಾಗೂ ಶಾಸಕ ವೀರಣ್ಣ ಚರಂತಿಮಠ ಅವರು ಸಚಿವರಾಗಬೇಕು ಎಂದು ಇಂದು ಬೆಳಿಗ್ಗೆ ತಿರುಪತಿ ತಿಮ್ಮಪ್ಪನ ದೇವಾಲಯದ ಮೆಟ್ಟಿಲನ್ನು ಮಂಡಿಯೂರಿ ಹತ್ತುವ ಮೂಲಕ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.










