ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿ…

69
firstsuddi

ಬೆಂಗಳೂರು : ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಕೆಲವು ಮಂಗಳಮುಖಿಯರು ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ನಗರದ ಹೆಬ್ಬಾಳ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ.

ನಿನ್ನೆ ರಾತ್ರಿ 9 ಗಂಟೆಗೆ ಜಿಮ್ ಮುಗಿಸಿ ರಕ್ಷಕ್ ಮನೆಗೆ ವಾಪಸಾಗುತ್ತಿದ್ದ ವೇಳೆ ಹೆಬ್ಬಾಳ ಪ್ಲೈ ಓವರ್ ಬಳಿ ಮಂಗಳಮುಖಿಯರು ರಕ್ಷಕ್ ಬ್ಯಾಗ್ ಹಿಡಿದು ಎಳೆದಿದ್ದಾರೆ. ಆಗ ರಕ್ಷಕ್ ಬೈಕ್ ನಿಂದ ಕೆಳಗೆ ಬಿದ್ದಿದ್ದು, ಕಾಲಿಗೆ ತರಚಿದ ಗಾಯಗಳಾಗಿವೆ. ಮಂಗಳಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ಫ್ಲೈ ಓವರ್ ಮೇಲೆಯೇ ಬೈಕ್ ಬಿಟ್ಟು ಓಡಿಹೋಗಿದ್ದಾನೆ. ಬಳಿಕ ಹೆಬ್ಬಾಳ ಪೊಲೀಸರ ಸಹಾಯದಿಂದ ಬೈಕ್ ತೆಗೆದುಕೊಂಡು ರಕ್ಷಕ್ ಮರಳಿದ್ದಾರೆ ಎನ್ನಲಾಗಿದೆ.