ಬೆಳಗಾವಿ : ಸ್ಯಾಂಡಲ್ವುಡ್ನ ಖ್ಯಾತ ಆ್ಯಂಕರ್ ಕಮ್ ನಟಿ ಅನುಶ್ರೀ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಡ್ರಗ್ಸ್ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅನುಶ್ರೀಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಯಾವ ರಾಜಕೀಯ ನಾಯಕರೂ ನಮ್ಮ ಮೇಲೆ ಒತ್ತಡ ತರುತ್ತಿಲ್ಲ. ಡ್ರಗ್ಸ್ ಕೇಸ್ ಪ್ರಕರಣಗಳಲ್ಲಿ ಯಾರೂ ಒತ್ತಡ ಹಾಕಲ್ಲ. ಡ್ರಗ್ಸ್ ಕೇಸ್ ನಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ಸೇವನೆ, ಪೂರೈಕೆ ಪ್ರಕರಣ ಗಂಭೀರವಾದದ್ದು. ಎಂಥ ಪ್ರಭಾವಿಗಳಾಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ. ನಿರೂಪಕಿ ಅನುಶ್ರೀ ಕೇಸ್ ನಲ್ಲಿ ನಮಗೆ ರಾಜಕೀಯ ಒತ್ತಡಗಳಿಲ್ಲ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಬಗ್ಗುವುದಿಲ್ಲ. ಡ್ರಗ್ಸ್ ಸೇವನೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ನಿರೂಪಕಿ ಅನುಶ್ರೀ ಹೆಸರನ್ನು ಕೈಬಿಟ್ಟಿದ್ದರೆ, ಆ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.










