ಬೆಂಗಳೂರು: ನಗರದ ಅಂಡರ್ಪಾಸ್ನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಸೋಮವಾರ ಕೆಲಸ ಮುಗಿಸಿಕೊಂಡು ರಾಮನಗರ ಕಡೆಗೆ ಬೈಕ್ನಲ್ಲಿ ಫಕ್ರುದ್ದೀನ್ ತೆರಳುತ್ತಿದ್ದರು. ಈ ವೇಳೆ ಕಾಚೋಹಳ್ಳಿ ಅಂಡರ್ ಪಾಸ್ ಮೇಲಿನ ನೈಸ್ ರೋಡ್ ಮೇಲೆ ಸಂಚರಿಸುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ನೈಸ್ ರಸ್ತೆಯಲ್ಲಿ ಬಿದ್ದಿದ್ದಾರೆ.
ಫ್ರಕ್ರುದ್ದೀನ್ ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ ಭಾನುವಾರ ನಗರದಲ್ಲಿ ಸುರಿದಿದ್ದ ಮಹಾಮಳೆಗೆ ಕೆಪಿ ಅಗ್ರಹಾರದ ಬಳಿ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ನಗರದ ಕೆಆರ್ ಸರ್ಕಲ್ ಬಳಿಯ ಅಂಡರ್ಪಾಸ್ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಸಿಲುಕಿ ಭಾನುರೇಖಾ ರೆಡ್ಡಿ(23) ಎಂಬ ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿದ್ದರು.










