ಬೆಂಗಳೂರು : ಇಂದು ಸಂಜೆ 5 ಗಂಟೆಗೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರ ಜೊತೆಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಸಭೆಯಲ್ಲಿ ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೆ? ಎಂಬ ಪ್ರಶ್ನೆ ಎದ್ದಿದೆ.
ಲಾಕ್ ಡೌನ್ ನಂತರವೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಇನ್ನಷ್ಟು ಬಿಗಿ ಕ್ರಮದ ಘೋಷಣೆ ಸಾಧ್ಯತೆ ಇದೆಯಾ? ಕಟ್ಟಡ ಕಾರ್ಮಿಕರಿಗೆ, ಶ್ರಮಿಕ ವರ್ಗದವರಿಗೆ ಅಥವಾ ರೈತರಿಗೆ ಏನಾದರೂ ಯೋಜನೆಗಳನ್ನು ಘೋಷಿಸುತ್ತಾರಾ? ಲಸಿಕೆ ಕೊರತೆ ಬಗ್ಗೆ ಇರುವ ಎಲ್ಲ ಗೊಂದಲಗಳ ಕುರಿತು ಸಂಜೆ ಸ್ಪಷ್ಟನೆ ನೀಡಲಿದ್ದಾರೆ. ಒಟ್ಟಾರೆ ಲಾಕ್ ಡೌನ್ ಅವಧಿ ಮುಗಿಯುವ ಮುನ್ನವೇ ಸಿಎಂ ಯಡಿಯೂರಪ್ಪನವರು ಕರೆದಿರುವ ಸುದ್ದಿಗೋಷ್ಠಿ ತೀವ್ರ ಕುತೂಹಲವನ್ನು ಹುಟ್ಟಿಸಿದೆ.










