ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯವಾಟಿಕೆ ದಂಧೆ, ಆರು ಜನರ ಬಂಧನ…

611
firstsuddi

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಹೊರ ರಾಜ್ಯದ ಯುವತಿಯರನ್ನು ವೇಶ್ಯವಾಟಿಕೆ ದಂಧೆಗೆ ದೂಡಿ, ಹಣ ಸಂಪಾದಿಸುತ್ತಿದ್ದ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಹೇಶ್ (23), ಮನುಕುಮಾರ್ (22), ಸ್ವರೂಪ (19), ರವಿ‌(32), ತುಕಾರಾಮ್ (27) ಬಂಧಿತ ಆರೋಪಿಗಳು. ನಗರದ ಕೆ ಆರ್ ಪುರಂ ನ ಬಾಡಿಗೆ ಮನೆಯೊಂದರಲ್ಲಿ‌ ಹೊರ ರಾಜ್ಯದ ಹುಡುಗಿಯರನ್ನು ಕಳ್ಳ ಸಾಗಾಣಿಕೆ ಮಾಡಿ, ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಇದೇ ತಿಂಗಳ 12 ರಂದು ಸಂಜೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರು ಯುವತಿಯರಿಗೆ ನಗರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದರು. ಸಧ್ಯ ಯುವತಿಯರನ್ನು ರಕ್ಷಿಸಿರುವ ಸಿಸಿಬಿ ಪೋಲೀಸರು ಬಂಧಿತರಿಂದ ಮೊಬೈಲ್, ನಗದು, ಸ್ಯಾಂಟ್ರೋ ಕಾರು, ಡಿಯೋ ದ್ವಿಚಕ್ರ ವಾಹನ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.