ಚಿಕ್ಕಮಗಳೂರು : ಎಂಬಿಬಿಎಸ್ ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ನಗರದ ಯುವತಿ ವಿ.ಕೆ.ಪ್ರಮಥ ಚಿನ್ನದ ಪದಕ ಗಳಿಸಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ವೈಧ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಮಥ ನಗರದ ಎಲ್.ಐ.ಸಿ ಅಭಿವೃದ್ದಿ ಅಧಿಕಾರಿ ವಿನೀತ್ ಕುಮಾರ್ ಹಾಗೂ ಜ್ಯೋತಿ ಅವರ ಪುತ್ರಿ. ಮೈಸೂರಿನ ಜೆಎಸ್.ಎಸ್ ವೈಧ್ಯಕೀಯ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಪ್ರಮಥ ಅವರಿಗೆ ಚಿನ್ನದ ಪದಕ ಪ್ರಧಾನ ಮಾಡಿದರು.










