ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆ ರಾಜ್ಯದ ವಿವಿಧೆಡೆ 9 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಏಕಕಾಲದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಎಸಿಬಿ ತಂಡ ಪರಿಶೀಲನೆ, ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಎಸಿಬಿ ದಾಳಿಗೆ ಒಳಗಾದ ಒಂಬತ್ತು ಅಧಿಕಾರಿಗಳ ವಿವರ :
• ಜಿ.ಶ್ರೀಧರ್, ಕಾರ್ಯಪಾಲಕ ಅಭಿಯಂತರ, ನಗರಾಭಿವೃದ್ಧಿ ವಿಭಾಗ ಜಿಲ್ಲಾಧಿಕಾರಿ ಕಚೇರಿ ಮಂಗಳೂರು
• ಸುರೇಶ್ ಮೋಹ್ರೆ, ಜೆಇ ಪಿಆರ್ ಇ ಬೀದರ್
• ಹೆಚ್.ಆರ್ ಕೃಷ್ಣಪ್ಪ, ಸಹಾಯಕ ನಿರ್ದೇಶಕ, ಮಾಲೂರು ನಗರ ಯೋಜನಾ ಪ್ರಾಧಿಕಾರ ಕೋಲಾರ
• ವೆಂಕಟೇಶ್ ಟಿ, ಡಿಸಿಎಫ್ ಸಾಮಾಜಿಕ ಅರಣ್ಯ ಮಂಡ್ಯ
• ಎ.ಕೃಷ್ಣಮೂರ್ತಿ, ಹಿರಿಯ ಮೋಟಾರು ವಾಹನ ನಿರೀಕ್ಷಕರು ಕೋರಮಂಗಲ
• ಕೃಷ್ಣ ಎಸ್, ಹೆಬ್ಸೂರು, ಇಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಉಡುಪಿ
• ಆರ್.ಪಿ ಕುಲಕರ್ಣಿ, ಸಿಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ
• ಎ.ಎನ್.ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಬಳ್ಳಾರಿ
• ಸಿದ್ದರಾಮ ಮಲ್ಲಿಕಾರ್ಜುನ್, ಎಇಇ, ಹೆಸ್ಕಾಂ ವಿಜಯಪುರ










