ಮಂಗಳೂರಿನ ಸುರತ್ಕಲ್ ಬಳಿ ಕಾಟಿಪಲ್ಯದಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ.

33

ಮಂಗಳೂರು: ಕರಾವಳಿ ಜಿಲ್ಲೆಯ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಯದಲ್ಲಿ ನಿನ್ನೆ ಭಾನುವಾರ ರಾತ್ರಿ ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದೆ. ಕಾಟಿಪಳ್ಯ 3ನೇ ಬ್ಲಾಕ್ ನ ಬದ್ರಿಯಾ ಪುರಸಭೆ ಮೇಲೆ ಕಲ್ಲೆಸೆತ ನಡೆದಿದೆ. ಕಲ್ಲು ತೂರಾಟದಿಂದ ಮಸೀದಿಯ ಗಾಜು ಪುಡಿಯಾಗಿದೆ. ಈದ್ ಮಿಲಾದ್ ಮುನ್ನಾ ದಿನವೇ ಘಟನೆ ನಡೆದಿದ್ದು ಪರಿಸ್ಥಿತಿ ಸ್ಥಳದಲ್ಲಿ ಉದ್ವೀಗ್ನವಾಗಿದೆ.
ನಿನ್ನೆ ಭಾನುವಾರ ರಾತ್ರಿ 10.30 ಸುಮಾರಿಗೆ 2 ಬೈಕ್ಗಳಲ್ಲಿ ಬಂದಿದ್ದ ನಾಲ್ವರು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಮಸೀದಿಗೆ ಸದ್ಯ ಬೀಗ ಹಾಕಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ.