ಚಿಕ್ಕಮಗಳೂರು – ಮಕ್ಕಳು ಉತ್ತಮ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯದ ಜೊತೆಗೆ ಆಡುವುದು, ಓಡುವುದು, ಹಾಡುವುದು ಮತ್ತು ಮಾತನಾಡುವುದನ್ನೂ ಕಲಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತಿನ ಜಿಲ್ಲಾಧ್ಯಕ್ಷ ಕುಂದೂರು ಆಶೋಕ್ ಸಲಹೆ ಮಾಡಿದರು..
ಭಾರತ ಸೇವಾದಳದ ಜ್ಞಾನ ಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆಸುತ್ತಿರುವ ಮಕ್ಕಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.
ಶಾಲೆಗಳು ಇತ್ತೀಚಿನ ವರ್ಷಗಳಲ್ಲಿ ಮಕ್ಕಳನ್ನು ಕೇವಲ ಓದುವ ಮತ್ತು ಅಂಕಗಳಿಸುವ ಯಂತ್ರಗಳನ್ನಾಗಿ ಮಾತ್ರ ರೂಪಿಸುತ್ತಿವೆ. ಪಠ್ಯವನ್ನು ಓದುವುದರಿಂದ ಅಂಕಗಳಿಸಿ ಉದ್ಯೋಗವನ್ನು ಮಾತ್ರ ಗಿಟ್ಟಿಸಿಕೊಳ್ಳಬಹುದು ಅದರೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಪಠ್ಯವನ್ನು ಓದಿ ಅಂಕ ಗಳಿಸಿದವರಿಗಷ್ಟೆ ಉನ್ನತ ಸ್ಥಾನಗಳು ಸೀಮಿತವಾಗಿಲ್ಲ. ಕಲೆ ಸಾಹಿತ್ಯ, ಸಂಗೀತ, ಕ್ರೀಡೆ, ಮಾತನಾಡುವ ಕಲೆಯನ್ನು ರೂಡಿಸಿಕೊಂಡವರೂ ಇಂದು ಅತ್ಯುನ್ನತ ಸ್ಥಾನಗಳನ್ನು ಪಡೆದಿದ್ದಾರೆ. ಪಿ.ಟಿ ಉಷಾ ಓಡಿ ಓಡಿ ಬದುಕಿದರು, ಸಚ್ಚಿನ್ ತೆಂಡೋಲ್ಕರ್ ಅಡಿ ಅಡಿ ಬದುಕಿದರು , ಗಂಗಾವತಿ ಪ್ರಾಣೇಶ್, ಪ್ರೊ.ಕೃಷ್ಣೇಗೌಡ ಮಾತನಾಡಿ ಮಾತನಾಡಿ ಬದುಕಿರುವ ನಿರ್ದಶನ ನಮ್ಮ ಕಣ್ಣ ಮುಂದಿದೆ ಎಂದರು.
ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಮಾತನಾಡುವ ಕಲೆ ಇವುಗಳು ನಮ್ಮ ಬದುಕನ್ನು ರೂಪಿಸುತ್ತದೆ ಸತ್ಫಜೆಯನ್ನಾಗಿ ಮಾಡುತ್ತವೆ, ಪರಿಶ್ರಮವಿಲ್ಲದೆ ಯಾವುದು ದೊರೆಯುವುದಿಲ್ಲ ಹಾಗಾಗಿ ಮಕ್ಕಳು ಸಾಧನೆಯ ಮೂಲಕ ಉತ್ತುಂಗಕ್ಕೇರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಬಿರದ ರೂವಾರಿ ಎಸ್.ಈ ಲೋಕೇಶ್ವರಾಚಾರ್ 20 ದಿನಗಳ ಅವಧಿಯಲ್ಲಿ ಯೋಗ, ಪ್ರಾಣಾಯಮ, ಕ್ರೀಡೆ, ಆರೋಗ್ಯ ನೈತಿಕ ಶಿಕ್ಷಣ ಬಾವೈಕ್ಯತೆ, ದೇಶ ಭಕ್ತಿಗೀತೆ, ರಾಷ್ಟ್ರ ಗೀತೆ, ಜಾನಪದ ಗೀತೆ, ಸೇವೆ ಸೇರಿದಂತೆ ಅನೇಕ ತರಬೇತಿಗಳನ್ನು ನೀಡಲಾಗಿದ್ದು ಮಕ್ಕಳು ಅವುಗಳನ್ನು ಇಲ್ಲಿಗೇ ಸೀಮಿತಗೊಳಿಸದೆ ಪ್ರತಿನಿತ್ಯ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಶಿಬಿರಾರ್ಥಿಗಳಾದ ಸಿ.ಎಸ್.ಯಶಸ್ವಿನಿ, ಸಾನ್ವಿ, ತೇಜಸ್ವಿನಿ, ಲೋಹಿತ್, ಮಹಮ್ಮದ್ ಝೈನ್ ಶಿಬಿರದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.
ವಿವಿಧ ಸ್ಪರ್ದೇಗಳಲ್ಲಿ ವಿಜೇತರಾದ ಮಕ್ಕಳು ಮತ್ತು ಶಿಬಿರಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
Home ನಮ್ಮ ಮಲ್ನಾಡ್ ಮಕ್ಕಳು ಪಠ್ಯದ ಜೊತೆಗೆ ಆಡುವುದು,ಹಾಡುವುದು ಮತ್ತು ಮಾತನಾಡುವುದನ್ನೂ ಕಲಿಯಬೇಕು -ಕುಂದೂರು ಆಶೋಕ್.










