ಮಗನಿಂದಲೇ ಹೆತ್ತ ತಾಯಿಯ ಕೊಲೆ!

92
firstsuddi

ಬೆಂಗಳೂರು : ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ನಗರದ ಮಾರತ್ ಹಳ್ಳಿಯ ದೇವರ ಬಿಸನಹಳ್ಳಿಯಲ್ಲಿ ನಡೆದಿದೆ. ಯಮುನಮ್ಮ (70) ಮೃತ ದುರ್ದೈವಿ. ಮಗ ಅಂಬರೀಶ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಮದ್ಯವ್ಯಸನಿಯಾಗಿದ್ದ ಅಂಬರೀಶ್ ಕುಡಿಯಲು ಹಣ ನೀಡುವಂತೆ ಯಮುನಮ್ಮ ಬಳಿ ಮಗ ಗಲಾಟೆ ಮಾಡಿದ್ದಾನೆ. ಈ ವೇಳೆ ಹಣ ನೀಡದ ಕೋಪಕ್ಕೆ ಯಮುನಮ್ಮ ಕೆನ್ನೆಗೆ ಅಂಬರೀಶ್ ಜೋರಾಗಿ ಹೊಡೆದಿದ್ದಾನೆ. ತೀವ್ರ ಸ್ವರೂಪದ ಏಟು ಬಿದ್ದ ಕಾರಣ ಸ್ಥಳದಲ್ಲೇ ತಾಯಿ ಯಮುನಮ್ಮ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.

ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.