ಮಗಳು ಮೃತಪಟ್ಟಿರುವ ವಿಷಯವನ್ನು ತಂದೆಗೆ ತಿಳಿಸದೇ ಕರ್ತವ್ಯಕ್ಕೆ ಕಳುಹಿಸಿದ ಡಿಪೋ ಅಧಿಕಾರಿಗಳು…

287
firstsuddi

ಕೊಪ್ಪಳ : ಮಗಳು ಮೃತಪಟ್ಟಿರುವ ವಿಷಯವನ್ನು ಕರ್ತವ್ಯದಲ್ಲಿದ್ದ ತಂದೆಗೆ ತಿಳಿಸದೇ ಅಧಿಕಾರಿಗಳು ಅಮಾನವೀಯತೆ ಮೆರೆದಿರುವ ಘಟನೆ ಗಂಗಾವತಿ ಈಶಾನ್ಯ ಸಾರಿಗೆ ಬಸ್ ಡಿಪೋದಲ್ಲಿ ನಡೆದಿದೆ. ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ್ ಎಂಬುವವರ ಮಗಳು ಕವಿತಾ(11) ಟೈಫಾಯ್ಡ್ ಜ್ವರದಿಂದ ಬುಧವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಮೃತಪಟ್ಟಿದ್ದು, ಮಗಳು ಮೃತಪಟ್ಟಿರುವ ವಿಷಯವನ್ನು ಕುಟುಂಬಸ್ಥರು ಡಿಪೋ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಡಿಪೋ ಅಧಿಕಾರಿಗಳು ಮಂಜುನಾಥ್ ಅವರಿಗೆ ಮಗಳು ಮೃತಪಟ್ಟಿರುವ ವಿಷಯವನ್ನು ತಿಳಿಸದೇ ಕರ್ತವ್ಯಕ್ಕೆ ಕಳುಹಿಸಿದ್ದು, ಗುರುವಾರ ಸಂಜೆ ಕರ್ತವ್ಯ ಮುಗಿಸಿ ಬಂದ ಬಳಿಕ ಮಂಜುನಾಥ್ ಅವರಿಗೆ ಮಗಳು ಮೃತಪಟ್ಟಿರುವ ವಿಷಯ ತಿಳಿದಿದ್ದು, ಮಗಳ ಸಾವಿನ ವಿಷಯ ಒಂದು ದಿನ ತಡವಾಗಿ ತಿಳಿದಿದ್ದರಿಂದ ಮಂಜುನಾಥ್ ಅವರು ಆತಂಕಕ್ಕೀಡಾಗಿದ್ದರು. ಕೂಡಲೇ ಅಧಿಕಾರಿಗಳ ಬಳಿ ಹೋಗಿ ಮಗಳು ಮೃತಪಟ್ಟಿರುವ ವಿಷಯ ತಿಳಿಸಿ ರಜೆ ಕೇಳಿದರೂ ಅಧಿಕಾರಿಗಳು ರಜೆ ನೀಡಲು ನಿರಾಕರಿಸಿದ್ದು, ಅಧಿಕಾರಿಗಳ ವಿರುದ್ಧ ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.