ಮಚ್ಚಿನಿಂದ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ!

136
firstsuddi

ಚಿಕ್ಕಮಗಳೂರು : ಹೆತ್ತ ಮಗನೇ ಮಚ್ಚಿನಿಂದ ತಾಯಿಯನ್ನ ಕೊಲೆ ಮಾಡಿರುವ ಘಟನೆ ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ.

ಸುಧಾ (48) ಕೊಲೆಯಾದ ದುರ್ದೈವಿ. ದುಶ್ಯಂತ್ (28) ಹೆತ್ತವಳನ್ನೇ ಹತ್ಯೆಗೈದ ಆರೋಪಿ. ಬುಧವಾರ ಮಧ್ಯಾಹ್ನ ಕೊಲೆ ಮಾಡಿ ಸಂಜೆವರೆಗೂ ಶವದ ಜೊತೆಯಲ್ಲೇ ಇದ್ದನು. ಸುಧಾರ ಕಿರಿಯ ಮಗ ಸಂತೋಷ್ ಕೆಲಸ ಮುಗಿಸಿ ಮನೆಗೆ ಬಂದಾಗ ತಾಯಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ವಿಚಾರ ತಿಳಿದು ಇಡೀ ಏರಿಯಾನೇ ದಿಗ್ಭ್ರಮೆಗೊಳಗಾಗಿತ್ತು.

ಮೂಲತಃ ಚಿಕ್ಕಮಗಳೂರು ಸಮೀಪದ ಇಂದಾವರ ನಿವಾಸಿಯಾಗಿದ್ದ ಸುಧಾ, ಇತ್ತೀಚಿಗೆ ಅಪಘಾತದಲ್ಲಿ ಪತಿಯನ್ನ ಕಳೆದುಕೊಂಡಿದ್ರು. ಹೀಗಾಗಿ ಎರಡು ವರ್ಷಗಳಿಂದ ನಗರದ ಗೌರಿಕಾಲುವೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರಾವಿಷನ್ ಸ್ಟೋರ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ಎಂಜಿನಿಯರಿಂಗ್ ಓದಿದ್ದ ಕಿರಿ ಮಗ, ಸದ್ಯ ವರ್ಕ್ ಫ್ರಮ್ ಹೋಂ ಕೆಲಸ ಮಾಡಿಕೊಂಡು ತಾಯಿಗೆ ನೆರವಾಗಿದ್ದ. ಇನ್ನೂ ಹಿರಿಮಗ ದುಶ್ಯಂತ್ ಒಮ್ಮೊಮ್ಮೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಸವನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.