ಚಿಕ್ಕಮಗಳೂರು : ಮತಾಂತರ ಮತಗಳ ಗಳಿಕೆಗೆ ಇರುವ ಸಾಧನ ಅಲ್ಲ. ಮತಾಂತರ ದೇಶಾಂತರಕ್ಕೆ ಸಮ ಅಂತ ಗಾಂಧಿಜೀ ಹೇಳಿದ್ದಾರೆ. ಮತಾಂತರದ ಬಗ್ಗೆ ಗಾಂಧಿ ಏನು ಹೇಳಿದ್ದರು ಅಂತ ಕಾಂಗ್ರೆಸ್ ಇತಿಹಾಸ ಓದಲಿ. ಸಿದ್ದರಾಮಯ್ಯನವರೇ ನೀವು ಒಮ್ಮೆ ಇತಿಹಾಸ ಓದಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಕಿಡಿ ಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆದರಿಸಿ ಮತಾಂತರ ಮಾಡುವವರು ಭಯ ಪಡಬೇಕು. ಸ್ವಯಿಚ್ಛೆಯಿಂದ ಮತಾಂತರಗೊಳ್ಳುವರಿಗೆ ಕಾಯ್ದೆಯಿಂದ ತೊಡಕಿಲ್ಲ. ಕಾಂಗ್ರೆಸ್ಸಿಗೆ ಸಮಾಜದ ಹಿತ, ರಾಷ್ಟ್ರಹಿತ ಎರಡರ ಕಾಳಜಿಯಿಲ್ಲ. ವೋಟ್ ಬ್ಯಾಂಕ್ ರಾಜನೀತಿ ಮಾತ್ರ ಅವರ ಆದ್ಯತೆ. ಬಹುಸಂಖ್ಯಾತ ಸಮಾಜ ಆಕ್ರಮಣಕಾರಿಯಾಗಿ ಹೊರಟ್ರೆ ಅವರೇ ಮತಾಂತರ ನಿಷೇಧ ಕಾಯ್ದೆ ತನ್ನಿ ಅಂತಾರೆ ಎಂದು ಹೇಳಿದರು.
ಮತಾಂತರ ದೇಶಾಂತರಕ್ಕೆ ಸಮ ಅಂತ ಗಾಂಧಿಜೀ ಹೇಳಿದ್ದಾರೆ. ಕಾಂಗ್ರೆಸ್ ನಮ್ದು ಗೋಡ್ಸೆ ಹಿಂದೂತ್ವ ಅಲ್ಲ, ಗಾಂಧಿ ಹಿಂದುತ್ವ ಎನ್ನುತ್ತಾರೆ. ಮತಾಂತರ ನಿಷೇಧ ಕಾಯ್ದೆ ಅಂದರೆ ಅವರವರ ಮತದಲ್ಲಿ ಸುರಕ್ಷಿತವಾಗಿ ಮತಾಚರಣೆ ಮಾಡಲಿ ಎನ್ನುವುದು. ವ್ಯಾಪಾರ, ಭಯ, ಆಮಿಷದ ಮೂಲಕ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಕಿಡಿಕಾರಿದ್ದಾರೆ.
ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದರೆ ಅಂಬೇಡ್ಕರ್ ಗೆ ಎಲ್ಲಿ ಜಾಗ ಸಿಗುತ್ತದೆ. ಕ್ರಿಸ್ತನಿಗೆ ಪರಿವರ್ತನೆಯಾದರೆ ಸಿದ್ದರಾಮಯ್ಯನವರಿಗೆ ಎಲ್ಲಿ ಜಾಗ ಇದೆ. ಹಿಂದೂಗಳು ಬೌದ್ಧರು, ವೈಷ್ಣವರಾದರೆ, ಅಂಬೇಡ್ಕರ್, ರಾಮನಿಗೆ ಜಾಗ ಸಿಗುತ್ತದೆ. ಜೈನರ ಮನೆಯಲ್ಲಿ ರಾಮ, ಗಣಪತಿಗೆ ಜಾಗ ಇದೆ. ಇಸ್ಲಾಮಿಗೆ ಪರಿವರ್ತನೆಯಾದರೆ ಅಂಬೇಡ್ಕರ್, ಬುದ್ಧನಿಗೂ ಜಾಗವಿರುವುದಿಲ್ಲ ಎಂದು ಹರಿಹಾಯ್ದಿದ್ದಾರೆ.










