ಬೆಂಗಳೂರು : ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಜೊತೆಗೆ ರಾಜಕೀಯವಾಗಿ ಕೆಲ ವಿಷಯಗಳನ್ನು ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆಯವರು ಬಂದು ಹರೇ ರಾಮ ಹರೇ ಕೃಷ್ಣಾ ಎಂದು ನಮ್ಮ ರಾಜ್ಯದಲ್ಲಿ ಭಜನೆ ಮಾಡುತ್ತಾರೆ. ಇದೊಂದು ಸೆಕ್ಯೂಲರ್ ರಾಜ್ಯವಾಗಿದೆ. ಕರ್ನಾಟಕದಲ್ಲಿ ಶಾಂತಿ ಕೆಡೆಸಲು ಇದೊಂದು ಪ್ರಯತ್ನವಾಗಿದೆ. ಇಂದು ಎಲ್ಲರಿಗೂ ಸೆಂಟ್ ಜೋಸೆಫ್, ಸೆಂಟ್ ಮಾರ್ಥಸ್ ನಂತಹ ಕ್ರೈಸ್ತ ಶಾಲೆ ಬೇಕು. ನಾನು ನಮ್ಮ ಹಳ್ಳಿಯಲ್ಲಿ ಕ್ರೈಸ್ತ್ ಸ್ಕೂಲ್ ನಲ್ಲಿ ಓದಿದೆ. ನನಗೆ ಅಲ್ಲಿ ಯಾವತ್ತೂ ಅವರ ಧರ್ಮದ ಬಗ್ಗೆ ಭೋದಿಸಿಲ್ಲ. ಎಲ್ಲಾದರೂ ಅವರು ಬಲವಂತ ಮಾಡಿರುವ ಉದಾಹರಣೆಯೂ ಇಲ್ಲ. ಸುಮ್ಮನೆ ಮಾನಸಿಕವಾಗಿ ಅವರಿಗೆ ಹಿಂಸೆ ಕೊಡುವ ಕೆಲಸ ಆಗುತ್ತಿದೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಎಂದು ವಾಗ್ದಾಳಿ ನಡೆಸಿದರು.
ನನಗೂ ಸಿಟಿ ರವಿಗೂ ಸಂಬಂಧವಿಲ್ಲ. ಆದರೂ ನನ್ನ ಬಗ್ಗೆ ಮಾತನಾಡುತ್ತಾರೆ. ಸಿಟಿ ರವಿ ಅಲ್ಲ ಪಟಾಕಿ ರವಿ. ಪಟಾಕಿ ಹೊಡಿಯೋದಷ್ಟೇ ಅವರ ಕೆಲಸ ಎಂದರು.










