
ಮರಿಯಮ್ಮನಹಳ್ಳಿ,: ರಸ್ತೆ ನಿಯಮಗಳನ್ನು ಪಾಲಿಸದೇ, ಅತಿವೇಗವಾಗಿ ತಾತ್ಸಾರದ ಮನೋಭಾವದಿಂದ ವಾಹನ ಚಲಾಯಿಸಿದರೇ ಅಪಘಾತಗಳು ಸಂಭವಿಸುತ್ತವೆ ಎಂದು ಪಟ್ಟಣದ ಪಿಎಸ್‍ಐ ಎಂ. ಶಿವಕುಮಾರ್ ವಿದ್ಯಾರ್ಥಿನಿಯರಿಗೆ ಸಲಹೆ ಮಾಡಿದರು.
ಅವರು ಪಟ್ಟಣದ ಪೊಲೀಸ್ ಠಾಣೆವತಿಯಿಂದ ಪ್ರಿಯದರ್ಶಿನಿ ಸ್ವ.ಪ.ಪೂ.ಕಾಲೇಜ್‍ನಲ್ಲಿ ರಸ್ತೆ ಸುರಕ್ಷತಾ ಅಭಿಯಾನದ ಕುರಿತು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಪೂರ್ವ ನಿಯೋಜನೆ ಇಲ್ಲದೆ ದುಃಖಕ್ಕೆ ಕಾರಣವಾಗುವ ಘಟನೆಯೇ ಅಪಘಾತ. ಅಪಘಾತಗಳು ಹೆಚ್ಚಾಗಿ ಸಂಭವಿಸುವುದು ವಾಹನ ಚಾಲಕರು ಕುಡಿದು ವಾಹನ ಚಲಾಯಿಸುವುದರಿಂದ, ಮೊಬೈಲ್ ಬಳಕೆ ಮಾಡುತ್ತಾ ತಾತ್ಸಾರದಿಂಧ ವಾಹನ ಚಲಾಯಿಸಿಕೊಂಡು ರಸ್ತೆಗೆ ಪ್ರವೇಶಿಸುವಾಗ ಎರಡು ಬದಿ ನೋಡದೇ ರಸ್ತೆಗೆ ಪ್ರವೇಶಿಸಿ ಅಪಘಾತಕ್ಕೀಡಾಗುತ್ತಾರೆ. ಅಲ್ಲದೇ ಕೆಲವೊಮ್ಮೆ ವಾಹನದ ತಾಂತ್ರಿಕ ದೋಷದಿಂದ, ಹವಾಮಾನ ವೈಪರೀತ್ಯದಿಂದಲೂ ಅಪಘಾತಗಳು ಸಂಭವಿಸುತ್ತವೆ ಎಂದರು.
ನಾವುಗಳು ಅಪಘಾತಗಳನ್ನು ತಡೆಗಟ್ಟಲು ರಸ್ತೆಯಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನಗಳ ಚಾಲಕರು ಹೆಲ್ಮೆಟ್‍ನ್ನು ಸ್ವಯಂಪ್ರೇರಿತರಾಗಿ ಹೆಲ್ಮೆಟ್ ಧರಿಸಬೇಕು. ಹೀಗಿದ್ದಾಗ ಅಪಘಾತಗಳನ್ನು ಕಡಿಮೆ ಮಾಡಬಹುದು. ಅಲ್ಲದೇ ವಾಹನದ ಸರಿಯಾದ ದಾಖಲೆಗಳು, ವಾಹನ ವಿಮೆ, ಡ್ರೈವಿಂಗ್ ಲೈಸನ್ ಇವೆಲ್ಲವುಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಚಾರಿ ನಿಯಮಗಳ ಹಾಗೂ ಪೊಲೀಸ್ ಇಲಾಖೆಯ ಸಮಸ್ಯೆಗಳನ್ನು ಕುರಿತಾಗಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಎಎಸ್‍ಐ ದುರುಗಪ್ಪ, ಕಾಲೇಜು ಪ್ರಾಚಾರ್ಯ ಎಂ ಅಶೋಕ, ಪದವಿ ಕಾಲೇಜು ಪ್ರಾಚಾರ್ಯ ಪಕ್ಕೀರಪ್ಪ, ಪ್ರಿಯದರ್ಶಿನಿ ಪ್ರೌಢಶಾಲೆಯ ಮು.ಗು. ಯಮನೂರಪ್ಪ, ಪೊಲೀಸ್ ಸಿಬ್ಬಂದಿ ಸಿದ್ದು ಹಾಗೂ ಇತರರು ಇದ್ದರು.










