ಮಲಯಾಳಂನ ಯುವ ನಿರ್ದೇಶಕ ಜೊಸೆಫ್ ಮನು ಜೇಮ್ಸ್ ನಿಧನರಾಗಿದ್ದಾರೆ.
ಕೇವಲ 31 ವರ್ಷದ ಈ ಯುವ ನಿರ್ದೇಶಕ ಹೆಪಟೈಟಿಸ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾಗಿದ್ದಾರೆ.
ಜೊಸೆಫ್ ಐ ಆ್ಯಮ್ ಕ್ಯೂರಿಯಸ್ ಸಿನಿಮಾದ ಮೂಲಕ ಬಾಲನಟರಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಹಲವಾರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಲ್ಲದೇ, ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಇರವು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಜೊಸೆಫ್ ನಿರ್ದೇಶನದ ಮೊದಲ ಸಿನಿಮಾ ನ್ಯಾನ್ಸಿ ರಾಣಿ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ಎದುರು ನೋಡುತ್ತಿದ್ದರು. ಈ ಸಿನಿಮಾ ರಿಲೀಸ್ ಗೂ ಮುನ್ನವೇ ಜೊಸೆಫ್ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಕುಟುಂಬದವರು, ಆಪ್ತರು ಹಾಗೂ ಸಿನಿಮಾ ತಂಡದವರು ಸಂತಾಪ ಸೂಚಿಸಿದ್ದಾರೆ.
ಜೊಸೆಫ್ ಮನು ಅವರ ಅಂತ್ಯಕ್ರಿಯೆ ನಿನ್ನೆ ಕುರವಿಲಂಗಾಡ್ ನ ಮೇಜರ್ ಆರ್ಕಿಪಿಸ್ಕೋಪಲ್ ಮಾರ್ತ್ ಮರಿಯಮ್ ಆರ್ಚ್ಡೀಕನ್ ಚರ್ಚ್ ನಲ್ಲಿ ನಡೆಸಲಾಗಿದೆ.










