ಮಲಯಾಳಂ ನಟ ಮಮ್ಮುಟ್ಟಿ ತಾಯಿ ಫಾತಿಮಾ ನಿಧನ…

89
firstsuddi

ದಕ್ಷಿಣ ಭಾರತದ ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಇಂದು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. 

ಫಾತಿಮಾ ಇಸ್ಮಾಯಿಲ್ ಅವರು ಕೊಚ್ಚಿಯ ಚೆಂಪುವಿನ ಮೂಲದವರಾಗಿದ್ದು, ಇವರು ಇಬ್ರಾಹಿಂ ಕುಟ್ಟಿ, ಶಫಿನಾ, ಸೌದಾ, ಜಕರಿಯಾ ಹಾಗೂ ಅಮೀನಾ ಸೇರಿದಂತೆ ತಮ್ಮ ಐವರು ಮಕ್ಕಳನ್ನು ಅಗಲಿದ್ದಾರೆ. ಮಮ್ಮುಟ್ಟಿ ಹಿರಿಯ ಪುತ್ರನಾಗಿದ್ದಾರೆ. ಮಮ್ಮುಟ್ಟಿ ಕೇವಲ ಮಲಯಾಳಂನಲ್ಲಿ ಮಾತ್ರವಲ್ಲ, ಕನ್ನಡವೂ ಸೇರಿದಂತೆ ಹಲವು ಸಿನಿಮಾ ರಂಗದಲ್ಲಿ ನಟಿಸಿದ್ದಾರೆ.

ಅಗಲಿದ ಫಾತಿಮಾ ಅವರಿಗೆ ಮಲಯಾಳಂ ಚಿತ್ರೋದ್ಯಮ ಕಂಬನಿ ಮಿಡಿದಿದೆ. ಇಂದು ಸಂಜೆ ಕೊಟ್ಟಾಯಂನ ಚೆಂಪುವಿನ ಜುಮಾ ಮಸೀದಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.