ಮಲೈ ಮಹದೇಶ್ವರನ ಚಿನ್ನದ ಕರಡಿಗೆ ನಾಪತ್ತೆ!

109
firstsuddi

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮಲೈ ಮಹದೇಶ್ವರಬೆಟ್ಟದಲ್ಲಿ ಉತ್ಸವ ಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಕ್ಷಾಂತರ ರೂ. ಮೌಲ್ಯದ ಕರಡಿಗೆ ಸರದಿ ಅರ್ಚಕರ ಸುಪರ್ದಿನದಲ್ಲಿತ್ತು.ಇದೀಗ ಚಿನ್ನದ ಕರಡಿಗೆ ನಾಪತ್ತೆಯಾಗಿದೆ. ಘಟನೆ ನಡೆದು ಐದು ದಿನಗಳಾದರೂ ಪ್ರಾಧಿಕಾರ ಯಾವುದೇ ದೂರು ದಾಖಲು ಮಾಡಿಲ್ಲ. ಕರಡಿಗೆ ನಿಜವಾಗಿಯೂ ಕಳುವಾಗಿದೆಯೋ ಅಥವಾ ಪೂಜಾ ಸಾಮಗ್ರಿಗಳ ಜೊತೆ ಸೇರಿಕೊಂಡಿದೆಯೋ ಎಂಬುದು ತಿಳಿದಿಲ್ಲ. ಇಂದು ಹುಂಡಿ ಎಣಿಕೆ ನಡೆಯಲಿದ್ದು, ಈ ವೇಳೆ ಸಿಗಬಹುದು ಎಂಬುದು ಅರ್ಚಕರ ಮಾತಾಗಿದೆ.