ಬೆಂಗಳೂರು : ಮೂರು ಕಾರ್ಪೊರೇಷನ್ ಸೇರಿದಂತೆ ಹಲವು ಕಡೆ ಚುನಾವಣೆ ನಡೆದಿದೆ. ಬೆಳಗಾವಿಯಲ್ಲಿ ಬಿಜೆಪಿ ಹೆಚ್ಚು ವಾರ್ಡ್ ಗಳಲ್ಲಿ ಗೆದ್ದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಅಂದುಕೊಂಡಿದ್ದೆವು. ಆದರೆ, ಹುಬ್ಬಳ್ಳಿ-ಧಾರವಾಡದಲ್ಲಿ ಅತಂತ್ರ ಪರಿಸ್ಥಿತಿ ಇದೆ. ಕಲಬುರಗಿಯಲ್ಲಿಯೂ ಸಹ ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ತರೀಕೆರೆಯಲ್ಲಿ ಕಾಂಗ್ರೆಸ್ ಹೆಚ್ಚು ವಾರ್ಡ್ಗಳಲ್ಲಿ ಗೆದ್ದಿದೆ. ದೊಡ್ಡಬಳ್ಳಾಪುರದಲ್ಲಿಯೂ ಅತಂತ್ರ ಪರಿಸ್ಥಿತಿ ಇದೆ. ಮೈಸೂರು ಪಾಲಿಕೆ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆದ್ದಿದೆ. ಅಲ್ಲಿ ಮೊದಲು ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು ಎಂದರು. ತರೀಕೆರೆಯಲ್ಲಿ ಕಾಂಗ್ರೆಸ್ ಹೆಚ್ಚು ವಾರ್ಡ್ಗಳಲ್ಲಿ ಗೆದ್ದಿದೆ. ದೊಡ್ಡಬಳ್ಳಾಪುರದಲ್ಲಿಯೂ ಅತಂತ್ರ ಪರಿಸ್ಥಿತಿ ಇದೆ. ಮೈಸೂರು ಪಾಲಿಕೆ ಬೈಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಾರೆ. ಅಲ್ಲಿ ಮೊದಲು ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವರು ಇದ್ದಾರೆ. ಮೂರು ಜನ ಬಿಜೆಪಿ ಶಾಸಕರಿದ್ದಾರೆ, ನಮ್ಮ ಶಾಸಕರಿಲ್ಲ. ರಾಜ್ಯದಲ್ಲಿಯೂ ಅವರದೇ ಸರ್ಕಾರ ಇದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳು ಅವರಿಗೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪ ಇದೆ. ಕಲಬುರಗಿಯಲ್ಲಿ ನಮ್ಮವರನ್ನು ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮುಂದಿನ ಚುನಾವಣೆಗಳಿಗೆ ಇದು ದಿಕ್ಸೂಚಿ ಅಲ್ಲ. ಮುಂದೆ ಬರುತ್ತಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಲಬುರಗಿಯಲ್ಲಿ ಪಕ್ಷೇತರರು ಮತ್ತು ಜೆಡಿಎಸ್ ಜತೆ ಹೊಂದಾಣಿಕೆ ಕುರಿತು ಖರ್ಗೆ ಅವರ ಜತೆ ಚರ್ಚೆ ಮಾಡಿ ಅಂತಿಮ ಮಾಡ್ತೀವಿ. ನಾನು ಈಗಲೇ ಈ ಬಗ್ಗೆ ಮಾತನಾಡಲ್ಲ ಎಂದರು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟೂ ಕಾಂಗ್ರೆಸ್ನವರೇ ಗೆಲ್ಲುತ್ತೇವೆ. ಬಿಬಿಎಂಪಿ ಚುನಾವಣೆಗೆ ದಿನಾಂಕ ಘೋಷಣೆಯಾಗಲಿ. ಈಗಲೇ ಆ ಬಗ್ಗೆ ಹೇಳುವುದಕ್ಕೆ ಆಗಲ್ಲ. ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದೆ ಎಂದು ನಾನು ಒಪ್ಪಿಕೊಳ್ತೇನೆ. ಬಿಜೆಪಿಗೆ ಈ ಚುನಾವಣೆ ಎಚ್ಚರಿಕೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಫಲಿತಾಂಶ ಜನರು ಬಿಜೆಪಿ ಪರವಾಗಿ ಇದ್ದಾರೆ ಎಂದು ಸೂಚಿಸುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿರುವ ವಿಚಾರವಾಗಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಪರ ಜನರು ಇದ್ರೆ ಹುಬ್ಬಳ್ಳಿ ಧಾರವಾಡದಲ್ಲಿ ಗೆಲ್ಲಬೇಕಿತ್ತು. ಹಣ ಅಧಿಕಾರ ಅವರ ಪರವಗಿತ್ತು. ಬೆಳಗಾವಿಯಲ್ಲಿ ನಮ್ಮ ಶಸಾಸಕರು ಇಲ್ಲ. ಆದ್ರೂ ನಮ್ಮ ಪರವಾಗಿ ಸಿಟ್ ಬಂದಿದೆ. ಕಲ್ಬುರ್ಗಿಯಲ್ಲಿ ಬಿಜೆಪಿ ಗೆದ್ದಿಲ್ಲ, ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಹಾಗಾದ್ರೆ ಬಿಜೆಪಿ ಪರವಾದ ಅಲೆ ಎಲ್ಲಿದೆ ಎಂದು ಕೇಳಿದ್ದಾರೆ.










