ಮಹಾರಾಷ್ಟ್ರದಲ್ಲಿ ಮತ್ತೆ ಪುಂಡಾಟ – ಕರ್ನಾಟಕ ಬಸ್‍ಗೆ ಕಲ್ಲು ತೂರಾಟ…

46
firstsuddi

ಬೆಳಗಾವಿ : ಮಹಾರಾಷ್ಟ್ರದಲ್ಲಿ ಮತ್ತೆ ಪುಂಡಾಟ ಮುಂದುವರಿದಿದ್ದು, ನಿನ್ನೆ ಕರ್ನಾಟಕದ ಬಸ್ ಗಳ ಮೇಲೆ ಕಪ್ಪು ಮಸಿ ಬಳಿಯಲಾಗಿತ್ತು. ಇದೀಗ ಕರ್ನಾಟಕದ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿ ಉದ್ಧಟತನ ಪ್ರದರ್ಶನ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ಮಿರಜ್ ಕಾಗವಾಡ ಮಧ್ಯೆ ಮಹಾರಾಷ್ಟ್ರದ ಪುಂಡರು ನಿನ್ನೆ ಮಧ್ಯರಾತ್ರಿ ಪುಣೆಯಿಂದ ಅಥಣಿಗೆ ಬರುತ್ತಿದ್ದ ಅಥಣಿ ಡಿಪೋಗೆ ಸೇರಿದ ಬಸ್ ಮೇಲೆ ಕಲ್ಲು ತೂರಿದ್ದಾರೆ. ಬಸ್ ಗೆ ಕಲ್ಲು ತೂರಿದ ಬಸ್ ನ ಮುಂದಿನ ಗಾಜು ಜಖಂ ಆಗಿದೆ.

ಕರ್ನಾಟಕದ ಬಸ್ ಗಳಿಗೆ ಕಲ್ಲು ತೂರಾಟ ಹಿನ್ನೆಲೆ ಕರ್ನಾಟಕದ ಬಸ್ ಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದ ಮಿರಜ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಕರ್ನಾಟಕದ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.