ಶಿವಮೊಗ್ಗ : ಮಹಿಳೆಯರ ಒಳಉಡುಪನ್ನು ಕದಿಯುತ್ತಿದ್ದ ಸೈಕೋ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಸತೀಶ್ ಎಂಬುವವರ ಮನೆಯಲ್ಲಿ ಪ್ರತಿದಿನ ಬಟ್ಟೆಯನ್ನು ತೊಳೆದು ಒಣಗಿಸುವುದಕ್ಕೆ ಹಾಕುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಮಹಿಳೆಯ ಉಡುಪನ್ನು ಮಾತ್ರ ಕದಿಯುತ್ತಿದ್ದರು ಎನ್ನಲಾಗಿದ್ದು, ಇದನ್ನು ಪತ್ತೆ ಹಚ್ಚಬೇಕೆಂದು ಮನೆಯ ಮಾಲೀಕ ಸತೀಶ್ ಅವರು ಮನೆಗೆ ಸಿಸಿ ಟಿವಿಯನ್ನು ಹಾಕಿಸಿದ್ದರು. ಈಗಾ ವ್ಯಕ್ತಿ ಉಡುಪನ್ನು ಕದಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮನೆಯ ಮಾಲಿಕ ಸತೀಶ್ ಅವರು ಸಿಸಿ ಟಿವಿಯನ್ನು ಪರಿಶೀಲನೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ವ್ಯಕ್ತಿಯನ್ನು ಅದೇ ಗ್ರಾಮದ ಮನುಕುಮಾರ್ ಎಂದು ಪತ್ತೆ ಹಚ್ಚಲಾಗಿದೆ. ಈ ಕುರಿತು ಸ್ಥಳಿಯರು ಅವರನ್ನು ಕೇಳಿದರೆ ನಾನು ಯಾವುದೇ ಉಡುಪನ್ನು ಕದ್ದಿಲ್ಲ ಎಂದು ಹೇಳಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯವನ್ನು ತೋರಿಸಿದಾಗ ಮನು ಕುಮಾರ್ ಕದ್ದಿರುವುದು ನಾನೇ ಎಂದು ಒಪ್ಪಿಕೊಂಡಿದ್ದು, ಬಳಿಕ ಗ್ರಾಮಸ್ಥರು ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










