ಚಿಕ್ಕಮಗಳೂರು : ಪೊಲೀಸರು ಮಾಡಿದ ತಪ್ಪಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೇದಿಕೆ ಮೇಲೆ ಎಸ್ಪಿ ವಿರುದ್ಧ ಗರಂ ಆಗಿ, ಮಾಧ್ಯಮದವರಿಗೆ ಕ್ಷಮೆ ಯಾಚಿಸಿರುವ ಘಟನೆ ನಡೆದಿದೆ. ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಇಂದು ಗುರು ಸಿದ್ಧರಾಮೇಶ್ವರರ 847ನೇ ಜಯಂತಿಯ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಅಜ್ಜಂಪುರಕ್ಕೆ ಆಗಮಿಸಿದ್ದು, ಈ ವೇಳೆ ಸುದ್ದಿಗೆಂದು ತೆರಳಿದ್ದ ಪತ್ರಕರ್ತರು ವೇದಿಕೆ ಮುಂಭಾಗಕ್ಕೆ ಹೋಗಲು ಪ್ರಯತ್ನಿಸಿದಾಗ ಅಲ್ಲಿದ್ದ ಪೊಲೀಸರು ಪತ್ರಕರ್ತರನ್ನ ಒಳಗೆ ಬಿಡಲು ನಿರಾಕರಿಸಿದರು. ಎಸ್ಪಿ ಕೊಟ್ಟ ಪಾಸ್ ತೋರಿಸಿದ್ರು ಪೊಲೀಸರು ಪತ್ರಕರ್ತರನ್ನ ಬಿಡಲಿಲ್ಲ. ಆಗ ಓರ್ವ ಪೊಲೀಸ್ ವರದಿಗಾರರ ಕುತ್ತಿಗೆಗೆ ಕೈಹಾಕಿ ತಳ್ಳಿದ್ದಾರೆ. ಪೊಲೀಸರ ವರ್ತನೆಯಿಂದ ಸಿಟ್ಟಿಗೆದ್ದ ಪರ್ತಕರ್ತರು ವೇದಿಕೆ ಮುಂಭಾಗವೇ ಧರಿಣಿ ನಡೆಸಿದ್ರು. ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಲ್ಲಿ ಕೂತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೆಲ್ಲಾವನ್ನು ನೋಡಿ ವೇದಿಕೆ ಮುಂಭಾಗಕ್ಕೆ ಎದ್ದು ಬಂದು ಎಸ್ಪಿಗೆ ಕ್ಲಾಸ್ ತೆಗೆದುಕೊಂಡರು. ಎಸ್ಪಿ ಹರೀಶ್ ಪಾಂಡೆ ವಿರುದ್ಧ ಗರಂ ಆಗಿ, ನಿನ್ನನ್ನ ಸಸ್ಪೆಂಡ್ ನಲ್ಲಿ ಇಡ್ತೀನಿ ಅಂದ್ರು. ಮಾಧ್ಯಮದವರನ್ನ ಒಳಗೆ ಬಿಡೋದಕ್ಕೆ ನಿಮಗೇನು ಕಷ್ಟ. ಏನು ಗಂಟು ಕಳೆದುಕೊಳ್ತೀರಾ ಎಂದು ಪ್ರಶ್ನಿಸಿದ್ದು, ಇನ್ನು ಮುಂದೆ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದ್ರೆ ಎಂತಹಾ ಉನ್ನತ ಅಧಿಕಾರಿಯಾದ್ರು ಕ್ರಮ ಕೈಗೊಳ್ಳುತ್ತೇನೆಂದು ವೇದಿಕೆಯಲ್ಲೇ ಎಸ್ಪಿ ವಿರುದ್ಧ ಗರಂ ಆದರು.
Home Breaking News ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದ್ರೆ ಎಂತಹಾ ಉನ್ನತ ಅಧಿಕಾರಿಯಾದ್ರು ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ









