ಬಣಕಲ್: ಚಕ್ಕಮಕ್ಕಿಯ ಜುಮ್ಮಾ ಮಸೀದಿ ಬಳಿಯಿಂದ ಬಣಕಲ್ನ ಪೆಟ್ರೋಲ್ ಬಂಕ್ವರೆಗೆ ಮೂರು ಕಿ.ಮೀ ಅಂತರದ ಈದ್ ಮಿಲಾದ್ ಮೆರವಣಿಗೆಯು ಅಲಂಕೃತ ವಾಹನಗಳ ಮೂಲಕ ಶಾಂತಿಯಿಂದ ಸಾಗಿತು. ಮುಸ್ಲಿಂ ಭಕ್ತರು ಹಸಿರು ಬಾವುಟ ಹಿಡಿದು ಸಾಗಿದರೆ,ಬಾಲಕರು ದಫ್ಪ್ ನೃತ್ಯದ ಮೂಲಕ ಮೆರವಣಿಯಲ್ಲಿ ಗಮನ ಸೆಳೆದರು.
ನಂತರ ಬಣಕಲ್ನಲ್ಲಿ ಜರುಗಿದ ಬೃಹತ್ ಮಿಲಾದ್ ಸಮ್ಮೇಳನದ ಸಭೆಯಲ್ಲಿ ಗುಲ್ಲನ್ ಪೇಟೆಯ ಧರ್ಮಗುರು ಹಜರತ್ ಅಬ್ದುಲ್ ಮುಬೀನ್ ರಝ್ವಿ ನಯೀಮಿ ಮಾತನಾಡಿ, ಮಾನವನು ಸರ್ವ ಧರ್ಮದೊಂದಿಗೆ ಪರಸ್ಪರ ಪ್ರೀತಿ,ಬಾಂಧವ್ಯದ ಜೊತೆ ಬದುಕುವುದರ ಮೂಲಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಆದರ್ಶವನ್ನು ಪಾಲಿಸಿ ಸಮಾಜದಲ್ಲಿ ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧರ್ಮಗುರು ಅಬ್ದುಲ್ ಅಜೀಜ್ ದಾರಿಮಿ ಚೊಕಬೆಟ್ಟು ಮಾತನಾಡಿ, ಮಹಮ್ಮದ್ ಪೈಗಂಬರರು ಸ್ವಾರ್ಥ ಮನೋಭಾವ ದೂರಗೊಳಿಸಿ ಪರರಿಗೆ ಸಹಾಯವಾಗಬೇಕು. ಸಮಾಜದಲ್ಲಿ ಸಹನಶೀಲತೆ,ಸೌಹಾರ್ಧ ಮನೋಬಾವ,ಮಾನವೀಯತೆಯಿಂದ ನಡೆದರೆ ನಾವು ನೇರವಾಗಿ ಮೋಕ್ಷವನ್ನು ಕಾಣುತ್ತೇವೆ.ಹಸಿದವರಿಗೆ ಅನ್ನ ನೀಡುವುದೇ ಸ್ವರ್ಗದ ಮೆಟ್ಟಿಲಾಗಿದೆ.ಮಾನವೀಯ ಸಂಬಂಧಗಳು ಮನುಷ್ಯರಲ್ಲಿ ಬದಲಾಗುತ್ತಿವೆ. ಪ್ರಾಣಿಗಳು ಪ್ರಾಣಿಗಳಂತೆ ವರ್ತಿಸಿ ಬದುಕು ಸಾಗಿಸುತ್ತವೆ.ಆದರೆ ಮನುಷ್ಯ ಮಾತ್ರ ಸಹಬಾಳ್ವೆ ನಡೆಸದೇ ಕ್ರೂರಿತನದಲ್ಲೇ ಬದುಕುತ್ತಿದ್ದಾನೆ ಇದು ಸಲ್ಲದು. ಅನ್ಯಾಯವಾದರೂ ಸಹನೆಯನ್ನು ಪಾಲಿಸು ಎಂದು ಪೈಗಂಬರರು ತೋರಿಸಿಕೊಟ್ಟಿದ್ದಾರೆ. ಹಗಲಿನಲ್ಲಿ ಬಡವರ ಸೇವೆ,ರಾತ್ರಿ ಪ್ರಾರ್ಥನೆ ಮಾಡುವ ಮೂಲಕ ಸೌಹಾರ್ಧತೆಯ ಬದುಕು ಸಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಣಕಲ್ ಈದ್ ಮಿಲಾದ್ ಆಚರಣಾ ಸಮಿತಿಯ ಗೌರವಾಧ್ಯಕ್ಷ ಅಸ್ಗರ್ ಅಹಮ್ಮದ್, ಕಾರ್ಯಧರ್ಶಿ ಫಾರೂಕ್, ಪ್ರಾಂಶುಪಾಲ ಹಂಝ ಮುಸ್ಲಿಯಾರ್ , ಬಿ.ಎಂ.ಆಲಿ, ಪರ್ವೀಜ್ ಅಹಮ್ಮದ್, ಮಹಮ್ಮದ್ಆಲಿ, ಎ.ಸಿ.ಆಯೂಬ್, ಅರಫತ್, ಸೈಯದ್ ಆಲಿ, ಇರ್ಪಾನ್, ಮುಮ್ತಾಜ್, ರಫೀಕ್,ಯಾಕೂಬ್, ಗೌಸ್ಮೊಯಿದ್ದೀನ್, ಅಹಮ್ಮದ್ ಬಾವಾ, ರಶೀದ್,ಸಿದ್ದೀಕ್,ರಿಯಾಜ್, ಬಿ.ಎ.ಉಮ್ಮರ್, ಆರೀಪ್,ಅಬೂಬೇಕರ್ ಸಿದ್ದಿಕ್, ಟಿ.ಎ.ಖಾದರ್ ಹಾಗೂ 6 ವಿವಿಧ ಜಮಾತ್ನ ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖಂಡ ಎ.ಸಿ.ಆಯೂಬ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ,ವಂದಿಸಿದರು.
Home ಸ್ಥಳಿಯ ಸುದ್ದಿ ಮಾನವನ ಬದುಕು ಪ್ರೀತಿ ಬಾಂಧವ್ಯದ ಸಂಕೇತವಾಗಬೇಕು:ಗುಲ್ಲನ್ಪೇಟೆಯ ಧರ್ಮಗುರು ಅಬ್ದುಲ್ ಮುಬೀನ್ ರಝ್ವಿ ನಯೀಮಿ










