ಮಾನವೀಯತೆಯನ್ನು ಎತ್ತಿ ಹಿಡಿಯುವ ಪ್ರತಿ ಕಾರ್ಯವೂ ಗೌರವಾಯುತವಾದದ್ದು ಮತ್ತು ಪ್ರಮುಖವಾದದ್ದು : ಹೆಚ್.ಡಿ. ಕುಮಾರಸ್ವಾಮಿ…

210
firstsuddi

ಬೆಂಗಳೂರು : ಕಾರ್ಮಿಕರ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ತಿಳಿಸಿದಂತೆ ಯಾವ ಕೆಲಸವೂ ಅಮುಖ್ಯವಲ್ಲ. ಮಾನವೀಯತೆಯನ್ನು ಎತ್ತಿ ಹಿಡಿಯುವ ಪ್ರತಿ ಕಾರ್ಯವೂ ಗೌರವಾಯುತವಾದದ್ದು ಮತ್ತು ಪ್ರಮುಖವಾದದ್ದು. ಅಂಥ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ಕರ್ತವ್ಯನಿರ್ವಹಿಸುವ ಮೂಲಕ ಸಮಾಜಕ್ಕೆ ಹಾಗೂ ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ಶ್ರಮಜೀವಿಗಳಿಗೆ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.