ಮಾಸ್ಕ್ ಹಾಕಿ ಎಂದಿದ್ದಕ್ಕೆ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ನ ಹಲ್ಲು ಮುರಿದ ಯುವಕರು!

91
firstsuddi

ಚಿಕ್ಕಬಳ್ಳಾಪುರ : ಮಾಸ್ಕ್ ಹಾಕಿ ಎಂದಿದ್ದಕ್ಕೆ ಇಬ್ಬರು ಪುಂಡರು ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ನ ಮೇಲೆ ಹಲ್ಲೆ ಮಾಡಿ ಆತನ ಹಲ್ಲು ಮುರಿದಿರುವ ಘಟನೆ ನಗರದಲ್ಲಿ ನಡೆದಿದೆ.

ಮುಳುಬಾಗಿಲು ಡಿಪೋಗೆ ಸೇರಿದ ಕೆ ಎ07ಎಫ್ 1608 ಬಸ್ ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಬರುವಾಗ ಚಿಕ್ಕಬಳ್ಳಾಪುರ ನಗರ ಹೊರವಲಯದ ಚದಲಪುರ ಬಳಿ ಬಸ್ ಹತ್ತಿದ ಇಬ್ಬರು ಯುವಕರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ನಿರ್ವಾಹಕ ಮುನಿಕೃಷ್ಣಪ್ಪ ಎಂಬಾತ ಪ್ರಶ್ನಿಸಿದ್ದಾರೆ. ಈ ವೇಳೆ ನಿರ್ವಾಹಕನ ಜೊತೆ ಗಲಾಟೆ ಮಾಡಿಕೊಂಡ ಯುವಕರಿಬ್ಬರು ಟಿಫನ್ ಬಾಕ್ಸ್ ಮೂಲಕ ನಿರ್ವಾಹಕ ಮುನಿಕೃಷ್ಣಪ್ಪನ ಮುಖಕ್ಕೆ  ಜೋರಾಗಿ ಹೊಡೆದಿದ್ದಾರೆ. ಪರಿಣಾಮ ಮುನಿಕೃಷ್ಣಪ್ಪನ ಹಲ್ಲು ಮುರಿದಿದೆ.

ಬಸ್ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಇಬ್ಬರು ಯುವಕರನ್ನ ಹಿಡಿದ ಸಾರ್ವಜನಿಕರು ಹಾಗೂ ಕೆಎಸ್ ಆರ್ ಟಿಸಿ ಇತರೆ ಸಿಬ್ಬಂದಿ ಇಬ್ಬರು ಯುವಕರನ್ನ ಪೊಲೀಸರಿಗೆ ಒಪ್ಪಿಸಿಲು ಮುಂದಾಗಿದ್ದಾರೆ. ಈ ವೇಳೆ ಓರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ಮತ್ತೋರ್ವ ಯುವಕನನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಗಾಯಾಳು ಮುನಿಕೃಷ್ಣರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.