ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌-2019 ಪ್ರಶಸ್ತಿ ಗೆದ್ದ ಬೀದರ್‍ನ ನಿಶಾ ತಾಳಂಪಳ್ಳಿ …

259
firstsuddi

ಬೀದರ್ : ಜಿಲ್ಲೆಯ ಕುಗ್ರಾಮದ ಯುವತಿ ನಿಶಾ ಅವರು ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌-2019 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು, ಈ ಮೂಲಕ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದ ರಾಜ್ಯದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೀದರ್‍ನ ದುಮ್ಮಸ್ನೂರು ಗ್ರಾಮದ ನಿವಾಸಿಯಾಗಿರುವ ನಿಶಾ ತಾಳಂಪಳ್ಳಿ ಅವರು ಬೀದರ್‍ನಲ್ಲಿ ಪಿಯುಸಿವರೆಗೆ ಶಿಕ್ಷಣ ಮುಗಿಸಿ ಬಳಿಕ ಹೈದರಾಬಾದ್‍ನಲ್ಲಿ ಡಿಪ್ಲೋಮಾ ಇನ್ ಏವಿಎಷನ್ ಮಾಡಿದ್ದು, ಈ ವೇಳೆ ಹೈದರಾಬಾದ್‍ನಲ್ಲಿ ಒಂದು ತಿಂಗಳ ಕಾಲ ಇಂಡಿಯನ್ ಫ್ಯಾಷನ್ ಪಿಸ್ತಾ ಆಡಿಷನ್‍ನಲ್ಲಿ ಭಾಗಿಯಾಗಿ ತರಬೇತಿ ಪಡೆದು ಸ್ಪರ್ಧೆಗೆ ಆಯ್ಕೆಯಾಗಿದ್ದರು. ಬಳಿಕ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ನವೆಂಬರ್ 14ರಿಂದ 18ರವರೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶದ ವಿವಿಧೆಡೆಯಿಂದ ಭಾಗವಹಿಸಿದ್ದ 30ಜನ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.