ಮೀನು ವ್ಯಾಪಾರಿ ಮೇಲೆ ಹಲ್ಲೆ ನಡೆಸಿ 2.15 ರೂ. ಲಕ್ಷ ನಗದು ದರೋಡೆ…

97
firstsuddi

ಮಂಗಳೂರು : ಟೆಂಪೊ ಅಡ್ಡಗಡ್ಡಿ ಮೀನು ವ್ಯಾಪಾರಿಯೊಬ್ಬರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ 2.15 ರೂ ಲಕ್ಷ ನಗದು ದೋಚಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಅಡಂಕುದ್ರು ಎಂಬಲ್ಲಿ ನಡೆದಿದೆ.

ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಾಪಾರಿ ಮುಸ್ತಾಫ ಎಂಬುವರು ಹಲ್ಲೆಗೊಳಗಾದವರು. ಮುಸ್ತಾಫ ಅವರು ಇಂದು ಮುಂಜಾನೆ ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ವೇಳೆ ಕೆಂಪು ಬಣ್ಣದ ಕಾರಿನಲ್ಲಿ ಬಂದ ತಂಡವೊಂದು ಇವರನ್ನು ಅಡ್ಡಗಟ್ಟಿದೆ.

ಬಳಿಕ ಮುಸ್ತಾಫ ಅವರು ಟೆಂಪೋದಿಂದ ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿದ್ದ ಮೂವರು ಮುಸುಕುದಾರಿಗಳ ತಂಡದ ಪೈಕಿ ಇಬ್ಬರು ಕೆಳಗಿಳಿದು ಹಣದ ಬ್ಯಾಗ ನೀಡುವಂತೆ ಬೆದರಿಸಿದ್ದಾರೆ. ಆದರೆ ಕೊಡಲು ನಿರಾಕರಿಸಿದ್ದಕ್ಕಾಗಿ ಮುಸ್ತಾಫ ಅವರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ್ದಾರೆ. ಅಲ್ಲದೇ ಟೆಂಪೋದಲ್ಲಿದ್ದ 2.15 ಲಕ್ಷ ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಸದ್ಯ ಗಾಯಾಳು ಮುಸ್ತಾಫ ಅವರನ್ನು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.