ಮುಖ್ಯಮಂತ್ರಿಗಳೇ ಕೂಡಲೇ ಕರ್ನಾಟಕವನ್ನು ಸಂಪೂರ್ಣ ಲಾಕ್ ಡೌನ್ ಮಾಡಿ : ವಿಶ್ಚನಾಥ್ ಒತ್ತಾಯ…

127
firstsuddi

ಮೈಸೂರು : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಅರ್ಧ ಲಾಕ್ ಡೌನ್ ಮಾಡುವುದರಿಂದ ಕೊರೊನಾ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಕೊರೊನಾ ತಡೆಗಟ್ಟುವ ಬದಲು ಹೆಚ್ಚಾಗುತ್ತಿದೆ ಹೀಗಾಗಿ ಪೂರ್ತಿ ಲಾಕ್ ಡೌನ್ ಮಾಡಿ. ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳು, ಮದ್ಯಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಜನರು ಗುಂಪು ಗುಂಪಾಗಿ ಹೊರ ಬರುತ್ತಿದ್ದಾರೆ. ಇದು ಕೊರೊನಾ ಹರಡಲು ಕಾರಣವಾಗುತ್ತಿದೆ. ಕೊರೊನಾಗೆ ಕಡಿವಾಣ ಹಾಕಲು ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲೇಬೇಕು ಎಂದು ಒತ್ತಾಯಿಸಿದರು.

ದೇಶದ ಕೊರೊನಾ ಪರಿಸ್ಥಿತಿಯನ್ನು ಕಂಡು ವಿದೇಶಿ ಮಾಧ್ಯಮಗಳು ಅಣಕು ಮಾಡುತ್ತಿವೆ. ಡಬ್ಲ್ಯೂಎಚ್ಓ ಸೇರಿ ವಿವಿಧ ಸಂಸ್ಥೆಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ ಆದರೆ ಪರಿಸ್ಥಿತಿ ಹೀಗೆ ಬಿಟ್ಟರೆ ಮುಂದೆ ತೊಂದರೆ ಆಗಲಿದೆ. ಮುಖ್ಯಮಂತ್ರಿಗಳೇ ಕೂಡಲೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಿ ಎಂದು ವಿಶ್ವನಾಥ್ ಎಂದು ಆಗ್ರಹಿಸಿದರು.