ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏನೇ ಹೇಳಿದರೂ ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ : ಹೆಚ್. ವಿಶ್ವನಾಥ್.

196
firstsuddi

ರಾಯಚೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏನೇ ಹೇಳಿದರೂ ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ ಎಂದು ಹೆಚ್. ವಿಶ್ವನಾಥ್ ಅವರು ಹೇಳಿದರು. ಈಲ್ಲೆಯ ದೇವದುರ್ಗದ ತಿಂಥಿಣಿ ಬಳಿಯ ಕಾಗಿನೆಲೆ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗಲು ಹಾಲುಮತ ಸಮಾಜದ ಮುಖ್ಯ ಪಾತ್ರವೂ ಇದೆ. ಹಾಲುಮತ ಸಮಾಜದ ಎಂಟಿಬಿ ನಾಗರಾಜ್, ಶಂಕರ್, ಭೈರತಿ ಬಸವರಾಜ್ ಹಾಗೂ ನಾನು ಸೇರಿದಂತೆ ಹಲವು ನಾಯಕರು ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಇದ್ದೇವೆ. ಹಾಲುಮತ ಸಮಾಜದಿಂದ ಬಂದ ನಾಲ್ಕು ಜನ ಶಾಸಕರು ತಮ್ಮ ಸ್ಥಾನವನ್ನು ತೊರೆದು ಅವರ ಬೆನ್ನ ಹಿಂದೆ ನಿಂತಿದ್ದೇವೆ. ಮುಖ್ಯಮಮತ್ರಿಗಳು ಏನೇ ಹೇಳಿದರೂ ಸಚಿವ ಸ್ಥಾನವನ್ನು ಕೇಳುವುದು ನಮ್ಮ ಕರ್ತವ್ಯ. ಅವರು ಮುಖ್ಯಮಂತ್ರಿಯಾಗಲು 17ಜನ ಶಾಸಕರು ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದೇವೆ. ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದರು