ಮುದ್ದಾದ ಅವಳಿ ಮಕ್ಕಳಿಗೆ ಹೆಸರಿಟ್ಟ ನಟಿ ಅಮೂಲ್ಯ.

111
firstsuddi

ಕೆಲ ತಿಂಗಳುಗಳ ಹಿಂದೆ ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅಮೂಲ್ಯ ಜಗದೀಶ್ ದಂಪತಿ ಅವಳಿ ಮಕ್ಕಳಿಗೆ ನಿನ್ನೆ ನಾಮಕರಣ ಶಾಸ್ತ್ರ ಮಾಡಿದ್ದು, ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಮುದ್ದಾದ ಹೆಸರನ್ನ ಇಟ್ಟಿದ್ದಾರೆ.

ಇನ್ನೂ ನಾಮಕರಣ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ತಾರೆಯರು, ಆಪ್ತರು ಸಾಕ್ಷಿಯಾಗಿದ್ದರು. ಮುದ್ದಾದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಶುಭಹಾರೈಸಿದ್ದಾರೆ.

ಚೆಲುವಿನ ಚಿತ್ತಾರ ಸೇರಿ ಹಲವು ಹಿಟ್ ಸಿನಿಮಾ ಮಾಡಿದ್ದ ಅಮೂಲ್ಯ ಜಗದೀಶ್ ಅವರ ಜೊತೆ ಮದುವೆ ಆದಾಗಿನಿಂದ ಸಿನಿಮಾದಿಂದ ದೂರು ಉಳಿದಿದ್ದಾರೆ. ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.