ಚಿಕ್ಕಮಗಳೂರು :ಸ್ವರ್ಗವನ್ನ ಧರೆಗಿಳಿಸಿದ ಕಾಫಿನಾಡು, ಪಶ್ಚಿಮ ಘಟ್ಟದಲ್ಲಿ ಕಂಡುಬಂತು ಪ್ರಕೃತಿಯೇ ನಾಚುವ ಸೌಂದರ್ಯ. ಈ ಅಂದವನ್ನ ವರ್ಣಿಸಲು ಪದಪುಂಜಗಳೇ ಸಾಲದು.. ಹೌದು, ಮುಳ್ಳಯ್ಯನಗಿರಿಯಲ್ಲಿ ಅತ್ಯಾಪರೂಪದ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಮುಳ್ಳಯ್ಯನಗಿರಿ ಸೌಂದರ್ಯಕ್ಕೆ ಮನಸೋತಿರೋ ಪ್ರವಾಸಿಗರು,ಪರ್ವತದ ಸುತ್ತಲೂ ಹಾಸಿದ ಬೆಳ್ಮುಗಿಲ ಸಾಲನ್ನ ಕಂಡು ರೋಮಾಂಚನಗೊಂಡಿದ್ದಾರೆ.ಮೋಡದ ಮರೆಯಲ್ಲಿನ ಪ್ರಕೃತಿ ಸೊಬಗಿನ ಅಪರೂಪದ ಕ್ಷಣಕ್ಕೆ ನೂರಾರು ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ಚದುರಿದ ಮಂಜು, ಮುಸುಕಿದ ಮೋಡದಿಂದ ಮುಳ್ಳಯ್ಯನಗಿರಿಯಲ್ಲಿ ಹೊಸ ಲೋಕ ಸೃಷ್ಟಿಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮುಳ್ಳಯ್ಯನಗಿರಿ ವಿಡಿಯೋ ಭಾರೀ ವೈರಲ್ ಆಗ್ತಿದ್ದು, ಪ್ರವಾಸಿಗರ ದಂಡು ಮುಳ್ಳಯ್ಯನಗಿರಿಯತ್ತ ಮುಖ ಮಾಡ್ತಿದೆ..









