ಮುಸ್ಲಿಂಮರು ತಮ್ಮ ಕರ್ತವ್ಯ ಮರೆತಿರುವುದರಿಂದ ಹಿಂದೂ ಸಮಾಜ ಜಾಗೃತವಾಗಿದೆ – ರಘುಪತಿ ಭಟ್.

78
firstsuddi

ಉಡುಪಿ : ಮುಸಲ್ಮಾನರು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲ. ಮುಸ್ಲಿಂಮರು ಕರ್ತವ್ಯವನ್ನು ಮರೆತಿರುವುದರಿಂದ ಹಿಂದೂ ಸಮಾಜ ಜಾಗೃತವಾಗಿದೆ. ಹಿಂದೂ ಧರ್ಮೀಯರು ಯಾವಾಗಲೂ ಸಹಿಷ್ಣುಗಳು. ನಮ್ಮದು ವಸುದೈವ ಕುಟುಂಬಕಂ ಎಂದು ಹೇಳಿಕೊಂಡು ಬಂದಿರುವ ಸಮಾಜ. ಇತ್ತೀಚೆಗೆ ಅತಿರೇಕವಾಗಿ ನಡವಳಿಕೆಗಳು ಕಂಡ ಬಂದಾಗ ಈ ತರದ ಬೆಳವಣಿಗೆಗಳಾಗಿವೆ ಎಂದು ಶಾಸಕ ರಘುಪತಿ ಭಟ್ ಅವರು ಹೇಳಿದ್ದಾರೆ.

ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸಲ್ಮಾನ ಸಮಾಜ ಸ್ವಲ್ಪ ಸುಧಾರಣೆಯನ್ನು ಹೊಂದಬೇಕಾಗಿದ್ದು, ನಾವು ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ ಎಂದು ಅರಿತುಕೊಳ್ಳಬೇಕಾಗುತ್ತದೆ. ಮುಸಲ್ಮಾನರು ಧರ್ಮಾಚರಣೆ ಮಾಡುವುದಕ್ಕೆ ಯಾವುದೇ ಆಕ್ಷೇಪಗಳು ಇಲ್ಲ, ಶಿಸ್ತು , ಸಮವಸ್ತ್ರ ಸಮಾನತೆಯನ್ನು ಎಲ್ಲರೂ ಪಾಲಿಸಬೇಕು ಅದರ ಜೊತೆಗೆ ಭಾರತದ ಪ್ರಜೆಯಾಗಿ ಅವರ ಕರ್ತವ್ಯ ಏನು ಎಂದು ಮೊದಲು ತಿಳಿದುಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಹಿಜಾಬ್, ವ್ಯಾಪಾರ, ಹಲಾಲ್, ವಿಚಾರ ಚರ್ಚೆಯಾಗುತ್ತಿದೆ. ನಮ್ಮ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಸಾರಿ ಸಾರಿ ಹೇಳಿದರೂ ಅವರು ಕೇಳಲಿಲ್ಲ ಇದರೊಂದಿಗೆ ಹೈಕೊರ್ಟ್ ತೀರ್ಪು ಬಂದ ಬಳಿಕ ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ಇದಕ್ಕೆ ಕಾರಣವಾಗಿದೆ. ಭಟ್ಕಳದಲ್ಲಿ ಹಿಂದೂಗಳ ಅಂಗಡಿಯನ್ನು ಜಬರ್ದಸ್ತ್ ಯಾಗಿ ಬಂದ್ ಮಾಡಿಸಲಾಯ್ತು ಈ ಎಲ್ಲಾ ಘಟನೆಗಳು ಹಿಂದೂಗಳ ಭಾವನೆಯನ್ನು ಕೆರಳಿಸಿವೆ ಆದ್ದರಿಂದ ಹಿಂದೂ ಗಳು ವ್ಯಾಪಾರ, ಹಲಾಲ್ ಮತ್ತಿತರ ವಿಚಾರವನ್ನು ಚರ್ಚೆಗೆ ತಂದರು. 2002ರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಿದರು. ಆದರೂ ಎರಡು ಸಮಾಜ ಒಟ್ಟಾಗಿ ಸೌಹಾರ್ದತೆಯಿಂದ ಹೋಗಬೇಕಾದ ಅವಶ್ಯಕತೆ ಇದೆ ಮುಸಲ್ಮಾನ ಸಮಾಜ ಹಿಜಾಬ್ ವಿಚಾರವನ್ನು ಮೊದಲು ಕ್ಲಿಯರ್ ಮಾಡಿಕೊಳ್ಳಬೇಕು ನಾವೀಗ 21ನೇ ಶತಮಾನದಲ್ಲಿದ್ದೇವೆ ಈಗಲೂ ಧರ್ಮವೇ ಮುಖ್ಯ ಎಂದು ಪಟ್ಟು ಹಿಡಿದಿದ್ದಾರೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಆಗದಿದ್ದಾಗ ಹಿಂದೂಗಳು ಕೂಡ ತಮಗೆ ಧರ್ಮ-ಧರ್ಮ ಮುಖ್ಯ ಎಂದು ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಹಲಾಲ್ ಮಾಂಸ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಲಾಲ್ ಚಿಕನ್ ಅನ್ನು ಹಿಂದೂಗಳು ಬಾಯ್ಕಾಟ್ ಮಾಡಿದ್ದು ತಪ್ಪಲ್ಲ. ಹಿಂದೂಗಳ ಈ ನಡೆಯಲ್ಲಿ ಯಾವುದೇ ತಪ್ಪಿಲ್ಲ ಆದರೆ ಎಲ್ಲಿಯೂ ಕೂಡ ಹಲಾಲ್ ಅಂಗಡಿಯನ್ನ ಬಂದ್ ಮಾಡಿ ಎಂದು ಹಿಂದುಗಳು ಒತ್ತಾಯ ಮಾಡಿಲ್ಲ. ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿದೆ ಕೋಳಿಯನ್ನು ಕಟ್ ಮಾಡುವ ರೀತಿ, ಅಲ್ಲಾಹ್ನಿಕೆ ಸಮರ್ಪಣೆ ಮಾಡುವುದು ಇಸ್ಲಾಂ ಪದ್ಧತಿಯಂತೆ ನಡೆಯುತ್ತದೆ. ಹಿಂದೂ ಜನಜಾಗೃತಿ ಮಾಡಿಸುವುದು ತಪ್ಪಲ್ಲ ಸರಿಯಾಗಿಯೇ ಇದೆ ಎಂದರು.