ಮೂಡಿಗೆರೆ: ನಾನಾ-ನೀನಾ ನೋಡೇ ಬಿಡೋಣ, ನಡು ರಸ್ತೆಯಲ್ಲೇ ಗೂಳಿ ಕಾಳಗ.

837

ಮೂಡಿಗೆರೆ : ನಾನಾ-ನೀನಾ ನೋಡೇ ಬಿಡೋಣ ಎಂದು ಎರಡು ಗೂಳಿಗಳು ನಡು ರಸ್ತೆಯಲ್ಲೇ ಹಠಕ್ಕೆ ಬಿದ್ದಂತೆ ಕಾಳಗ ನಡೆಸಿವೆ. ಮೂಡಿಗೆರೆ ನಗರದ ಮಧ್ಯೆ ನಡೆದ ಗೂಳಿಗಳ ಕಾಳಗವನ್ನ ಬಿಡಿಸುವಷ್ಟರಲ್ಲಿ ಸ್ಥಳಿಯರು, ಪೊಲೀಸರು ಹೈರಾಣಾದ್ರು. ಗೂಳಿಗಳ ತಳ್ಳಾಟದಲ್ಲಿ ರಸ್ತೆ ಬದಿ ನಿಂತಿದ್ದ ಬೈಕ್ ಗಳು ಬಿದ್ದಿದ್ದು, ರಸ್ತೆ ಮಧ್ಯೆ ಬರ್ತಿದ್ದ ಕಾರಿಗೆ ಹೋಗಿ ಡಿಕ್ಕಿ ಹೊಡೆದಿವೆ. ಇಷ್ಟಾದ್ರು ಬಿಡದ ಗೂಳಿಗಳು ನೂಕಾಡುತ್ತಾ ಹೊಟೇಲ್ ಪ್ರವೇಶಿಸಿವೆ. ಅಲ್ಲೂ ಅವುಗಳ ದ್ವೇಷ ಮುಂದುವರೆದಿದ್ದು ಹೊಟೇಲ್ ಒಳಗಿದ್ದ ಕುರ್ಚಿ, ಮೇಜುಗಳು ಚೆಲ್ಲಾಪಿಲ್ಲಿಯಾಗಿವೆ. ಒಂದೆಡೆ ಗಣಪತಿ ಮೆರವಣಿಗೆ ಬರ್ತಿದೆ, ಮತ್ತೊಂದೆಡೆ ಗೂಳಿಗಳ ಕಾಳಗ.  ಜನ ಅವುಗಳನ್ನ ಓಡಿಸಲು ಎಷ್ಟೇ ಹರಸಾಹಸ ಪಟ್ರು ಆಗ್ಲಿಲ್ಲ. ಹಳೇ ದ್ವೇಷದ ಸೇಡಿಗಾಗಿ ಹೋರಾಡ್ತಿದ್ದಂತೆ ನೀ ಬಿಟ್ಟರೂ ನಾ ಬಿಡೆ ಎಂದು ಒಂದಾದ ಮೇಲೊಂದು ಕಾಲ್ ಕೆರೆದು ಫೈಟಿಂಗ್ ಮುಂದಾಗಿದ್ವು. ಗೂಳಿಗಳ ಕಾಳಗವನ್ನ ನೆರೆದಿದ್ದವರು ಸಖತ್ತಾಗೇ ಎಂಜಾಯ್ ಮಾಡಿದ್ದಾರೆ.