ಮೂಡಿಗೆರೆ: ಕೊರೋನ ವೈರಸ್ ಭೀತಿಯಿಂದ ದೇಶವೇ ಲಾಕ್ ಡೌನ್ ಆದ್ರು ದಿನದಿಂದ ದಿನಕ್ಕೆ ಕೊರೋನ ಸೋಂಕಿತರು ಹಾಗೂ ಶಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಕುಡುಕರಿಗೆ ಇದ್ಯಾವುದರ ಅರಿವೇ ಇಲ್ಲ ಅನಿಸುತ್ತದೆ. ಹಳ್ಳಿ ದಿಲ್ಲಿಯಾಗ್ಲಿ, ದಿಲ್ಲಿ ಹಳ್ಳಿಯಾಗ್ಲಿ, ಊರಿಗೆ ಊರೇ ಸ್ಮಶನವಾದರು ಅವರಿಗೆ ಎಣ್ಣೆ ಬೇಕೇ ಬೇಕು. ಇಲ್ಲ ಅಂದರೆ ಆಗಲ್ಲ. ಈಗಾಗ್ಲೇ ರಾಜ್ಯದಲ್ಲಿ ಎಣ್ಣೆ ಸಿಗ್ತಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವವರು ಇದ್ದಾರೆ. ಅದೇ ರೀತಿ ಮೂಡಿಗೆರೆ ತಾಲೂಕಿನ ಕುಡುಕನೋರ್ವ ಮುಚ್ಚಿದ ಬಾರ್ ಮುಂದೆ ಟಿಕ್ ಟಾಕ್ ಮೂಲಕ ಗೋಳಿಟ್ಟಿದ್ದಾನೆ. ಮುಚ್ಚಿದ ಬಾರಿನ ಬಾಗಿಲ ಮುಂದೆ ಕುಡುಕನಂತೆ ತೇಲಾಡಿ, ಬಾಗಿಲು ತಬ್ಬಿ ಕಣ್ಣೀರಿಟ್ಟಿದ್ದಾನೆ. ಕುಡುಕನ ಈ ಕಣ್ಣೀರಿನ ಕಥೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಬಟ್ಟೆ ವೈರಲ್ ಆಗಿದೆ. ಬಹುಶಃ ಈ ಕೊರೋನ ವೈರಸ್‍ಗೆ ಕುಡುಕರು ಹಾಕಿರೋ ಶಾಪದಷ್ಟು ಬೇರೆ ಯಾರು ಹಾಕಿಲ್ಲ ಅನಿಸುತ್ತದೆ.









