ಮೂಡಿಗೆರೆ : ತಾಲ್ಲೂಕಿನ ಗೋಣಿಬೀಡು ಸರ್ಕಾರಿ ಆಸ್ಪತ್ರೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗಾ ವೈರಲ್ ಆಗಿದೆ. “ ಅರ್ಜೆಂಟಿಗಿಲ್ಲದ ಆಸ್ಪತ್ರೆ ನಮಗೇಕೆ ಬೇಕು? ಸಂಜೆ 5:15ಕ್ಕೆ ಆಸ್ಪತ್ರೆಗೆ ಹೋದಾಗ ಬಾಗಿಲು ಬಂದ್ ಎಂಬ ಪೋಸ್ಟ್ ಈಗಾ ವೈರಲ್ ಆಗಿದ್ದು, ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಮೋಹನ್ ಜಾಣಿಗೆ ಅವರು, ಸರ್ಕಾರ ಬಡವರಿಗಾಗಿಯೇ ನಿರ್ಮಾಣ ಮಾಡಿರುವ ಸರ್ಕಾರಿ ಆಸ್ಪತ್ರೆ ಯಾವಾ ಪ್ರಯೋಜನಕ್ಕೂ ಬಾರದೆ ಬಡ ರೋಗಿಗಳಿಗೂ ಸಹಾಯವಾಗುತ್ತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಪ್ರಥಮ ಚಿಕಿತ್ಸೆ ದೊರಕದೆ ರೋಗಿಗಳು ಪರದಾಡುತ್ತಿದ್ದು, 5 ಗಂಟೆಗೆ ಬಾಗಿಲು ಹಾಕಿಕೊಂಡು ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಹೋಗುತ್ತಾರೆ. ಇನ್ನಾದರೂ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಗಮನಹರಿಸಿ ಅವ್ಯವಸ್ಥೆಯನ್ನು ಸರಿಪಡಿಸಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವರ್ಗದವರ ಮೇಲೆ ಕಾನೂನುಕ್ರಮ ಜರುಗಿಸಬೇಕು ಎಂದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಅರ್ಜೆಂಟಿಗಿಲ್ಲದ ಗೋಣಿಬೀಡು ಸರ್ಕಾರಿ ಆಸ್ಪತ್ರೆ ನಮಗೇಕೆ ಬೇಕು? ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ...










