ಮೂಡಿಗೆರೆ : ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ಮನನೊಂದ ರೈತ ಆತ್ಮಹತ್ಯೆ…

4335
firstsuddi

ಮೂಡಿಗೆರೆ : ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ಹಿನ್ನೆಲೆ, ಮನನೊಂದ ರೈತರೊಬ್ಬರು ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ನಡೆದಿದೆ. ಚನ್ನಪ್ಪಗೌಡ(65) ಶೂಟೌಟ್ ಮಾಡಿಕೊಂಡ ರೈತ ಎನ್ನಲಾಗಿದ್ದು, ಭೂ ಕುಸಿತ ಮತ್ತು ಪ್ರವಾಹದಿಂದ ಇದ್ದ ಐದು ಎಕರೆ ಕಾಫಿ ಹಾಗೂ ಅಡಿಕೆ ತೋಟ ಕೊಚ್ಚಿ ಹೋಗಿತ್ತು. ಕಳೆದ ಒಂದು ತಿಂಗಳಿನಿಂದ ಪರಿಹಾರಕ್ಕಾಗಿ ಅಲೆದಾಡಿದ್ದರು. ಅಧಿಕಾರಿಗಳು ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಸರ್ಕಾರದಿಂದ ಯಾವಾ ಪರಿಹಾರ ಬಂದಿಲ್ಲ. ಹೀಗಾಗಿ ಮನೆ-ಮಠ ಕಳೆದುಕೊಂಡ ರೈತ ಚನ್ನಪ್ಪಗೌಡ ಇಂದು ತೋಟಕ್ಕೆ ಹೋಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.