ಮೂಡಿಗೆರೆ : ಆಲೇಕಾನ್ ಗ್ರಾಮದ ಗೃಹಿಣಿ ಬೆಂಗಳೂರಿನಲ್ಲಿ ಮಹಡಿಯಿಂದ ಜಿಗಿದು ಆತ್ಮಹತ್ಯೆ…

613
firstsuddi

ಬಣಕಲ್: ಕೊಟ್ಟಿಗೆಹಾರ ಸಮೀಪದ ಆಲೇಕಾನ್ ಹೊರಟ್ಟಿಯ ವಿಜಯಲಕ್ಷ್ಮಿ (26) ಎಂಬುವವರು ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾವ್ಯಾಪ್ತಿಯ ಚನ್ನಸಂದ್ರಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಆಲೇಕಾನ್ ಗ್ರಾಮದ ವಿಜಯಲಕ್ಷ್ಮಿ ಸಕಲೇಶಪುರ ಸಮೀಪದ ಬಾಳುಪೇಟೆಯ ಗೋಪಾಲ್ ಎಂಬುವವರನ್ನು ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಪ್ರಸ್ತುತ ಬೆಂಗಳೂರಿನ ಚನ್ನಸಂದ್ರದಲ್ಲಿ ವಾಸವಾಗಿದ್ದರು. ವಿಜಯಲಕ್ಷ್ಮಿ ಅವರ ಪತಿ ಗೋಪಾಲ್ ಸಮಾರೊಂಭವೊಂದಕ್ಕೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಮಹಡಿಯಿಂದ ಜಿಗಿದಿದ್ದು ಅಕ್ಕಪಕ್ಕದ ನಿವಾಸಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯಲಕ್ಷ್ಮಿ ಅವರನ್ನು ವೈಟ್ ಫೀಲ್ಡ್‍ನ ವೈದೇಹಿ ಆಸ್ಪತ್ರೆಗೆ ಕರೆದ್ಯೊಯ್ದಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಅಂತ್ಯಕ್ರಿಯೆ ಇಂದು ಆಲೇಕಾನ್‍ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.