ಕೊಟ್ಟಿಗೆಹಾರ : ಕನ್ನಡ ಭಾಷೆಯನ್ನು ನಿತ್ಯ ಬದುಕಿನಲ್ಲಿ ಬಳಸುವ ಮೂಲಕ ಕನ್ನಡ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಬೇಕು. ಆಗಮಾತ್ರ ಕನ್ನಡ ಭಾಷೆಯ ಅಭಿವೃದ್ದಿ ಸಾಧ್ಯ ಎಂದು ಭಾರತಿ ಬೈಲ್‍ನ ಸೇವಾಭಾರತಿ ಸಮಾಜಸೇವಾಸಂಘ ಅಧ್ಯಕ್ಷ ಪ್ರದೀಪ್ ಹಳೆಹಳ್ಳಿ ಹೇಳಿದರು.
ಸೇವಾಭಾರತಿ ಸಮಾಜಸೇವಾಸಂಘದ ವತಿಯಿಂದ ಭಾರತಿಬೈಲ್‍ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚಾಗಿ ಬಳಸಬೇಕು. ಆಡಳಿತದಲ್ಲಿ ಶೇ 100 ರಷ್ಟು ಕನ್ನಡ ಜಾರಿಯಾಗಬೇಕು. ಕಂಪ್ಯೂಟರ್, ಮೊಬೈಲ್ ಸೇರಿದಂತೆ ಎಲ್ಲೆಡೆ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಕನ್ನಡವನ್ನು ತಂತ್ರಜ್ಞಾನಸ್ನೇಹಿ ಭಾಷೆಯಾಗಿಸಬೇಕು ಎಂದರು.
ಬಿ. ಹೊಸಳ್ಳಿ ಗ್ರಾ.ಪಂ ಅಧ್ಯಕ್ಷ ರವಿಗೌಡ ಮಾತನಾಡಿ ಕನ್ನಡಾಭಿಮಾನವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಪ್ರೋತ್ಸಾಹ ನೀಡಬೇಕು. ಕನ್ನಡ ಭಾಷೆಯ ಸಮೃದ್ದತೆಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಮಕ್ಕಳಲ್ಲಿ ಕನ್ನಡ ನಾಡುನುಡಿಯ ಬಗ್ಗೆ ಅಭಿಮಾನ ಮೂಡಿಸಲು ಕಾರ್ಯೋನ್ಮುಖರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೊರೊನಾ ಸೇನಾನಿಗಳಾದ ಆರೋಗ್ಯ ಇಲಾಖೆಯ ಚೆನ್ನಪ್ಪ, ಹರಿಣಾಕ್ಷಿ, ಪ್ರಮೀಳಾ, ಆಶಾ ಕಾರ್ಯಕರ್ತೆ ಪದ್ಮಾಕ್ಷಿ, ಗ್ರಾ.ಪಂ ಅಧ್ಯಕ್ಷ ರವಿಗೌಡ ಅವರನ್ನು ಸನ್ಮಾನಿಸಲಾಯಿತು.
ಸೇವಾಭಾರತಿ ಸಮಾಜಸೇವಾಸಂಘದ ಕಾರ್ಯದರ್ಶಿ ಮಹೇಶ್, ಖಜಾಂಚಿ ರಾಮಚಂದ್ರ, ಮಾಜಿ ಗ್ರಾ.ಪಂ ಅಧ್ಯಕ್ಷ ರತೀಶ್‍ಗೌಡ, ಕಸ್ತೂರಿ ಬಾ ಟ್ರಸ್ಟ್ ಅಧ್ಯಕ್ಷ ವಿಶ್ವನಾಥಗೌಡ, ನಜರತ್ ಶಾಲೆಯ ಸಿಬ್ಬಂದಿ ಲವಕುಮಾರ್,ಕಾಪಿ ಬೆಳೆಗಾರರಾದ ಚೆಮಿನ್, ಮಹೇಂದ್ರ, ಜೇಸಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ರವಿಶಂಕರ್, ಹಳೆಹಳ್ಳಿ ಶಾಲೆಯ ಶಿಕ್ಷಕಿ ಸವಿತಾ, ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕನ್ನಡ ಭಾಷೆಯನ್ನು ನಿತ್ಯ ಬದುಕಿನಲ್ಲಿ ಬಳಸುವ ಮೂಲಕ ಕನ್ನಡ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಬೇಕು...










