ಮೂಡಿಗೆರೆ : ಕರ್ನಾಟಕ ಬಂದ್ ಗೆ ಬಣಕಲ್, ಕೊಟ್ಟಿಗೆಹಾರದಲ್ಲಿ ನೀರಸ ಪ್ರತಿಕ್ರಿಯೆ…

172
firtstsuddi

ಕೊಟ್ಟಿಗೆಹಾರ : ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಬಣಕಲ್ ಕೊಟ್ಟಿಗೆಹಾರದಲ್ಲಿ ನೀರಸ ಪ್ರತಿಕ್ರಿಯೆ ಉಂಟಾಯಿತು.
ಸರ್ಕಾರಿ, ಖಾಸಗಿ ಬಸ್, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ಅಂಗಡಿ ಮುಂಗಟ್ಟುಗಳು, ಹೋಟೆಲ್, ಪೆಟ್ರೋಲ್ ಬಂಕ್, ಮೆಡಿಕಲ್, ಖಾಶಗಿ ಸರ್ಕಾರಿ ಆಸ್ಪತ್ರೆಗಳು ತೆರೆದಿದ್ದವು. ಬಣಕಲ್ ಕೊಟ್ಟಿಗೆಹಾರದಲ್ಲಿ ಜನಸಂದಣಿ ಎಂದಿನಂತಿತ್ತು. ಧರ್ಮಸ್ಥಳ, ಹೊರನಾಡು, ಶೃಂಗೇರಿಗೆ ಕೊಟ್ಟಿಗೆಹಾರ ಮೂಲಕ ಬರುವ ಪ್ರವಾಸಿಗರಿಗೆ ಬಂದ್ ಬಿಸಿ ತಟ್ಟಲಿಲ್ಲ.